
ಇದೀಗ ಕಿಮ್ಜಾಂಗ್ ಉನ್ರಂತೆಯೇ ಕೇಶ ವಿನ್ಯಾಸ ಮಾಡಿಸಿಕೊಳ್ಳುವ ಮೂಲಕ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗ್ತಿದ್ದಾರೆ.
ತಮ್ಮ ಹೊಸ ಅವತಾರವನ್ನು ರೆಡಿಟ್ನಲ್ಲಿ ಶೇರ್ ಕೂಡ ಮಾಡಿದ್ದಾರೆ. ಈ ವ್ಯಕ್ತಿಯ ಸೂಚನೆಯಂತೆಯೇ ಕ್ಷೌರಿಕ ಕಿಮ್ ಜಾಂಗ್ ಉನ್ ಕೇಶ ವಿನ್ಯಾಸ ಮಾಡಿಕೊಟ್ಟಿದ್ದಾನೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದಹಾಗೆ ಈ ವಿನೂತನ ಹೇರ್ಸ್ಟೈಲ್ ಬಗ್ಗೆ ನಿಮ್ಮ ಅಭಿಪ್ರಾಯವೇನು..?