alex Certify ಹೇರ್ ಡ್ರೈಯರ್ ಬಳಸುವಾಗ ಶಾರ್ಟ್ ಸರ್ಕ್ಯೂಟ್ ನಿಂದ ಯುವತಿ ಕೂದಲಿಗೆ ಬೆಂಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇರ್ ಡ್ರೈಯರ್ ಬಳಸುವಾಗ ಶಾರ್ಟ್ ಸರ್ಕ್ಯೂಟ್ ನಿಂದ ಯುವತಿ ಕೂದಲಿಗೆ ಬೆಂಕಿ

ಬೆಂಗಳೂರು: ಹೇರ್ ಡ್ರೈಯರ್ ಬಳಸುವಾಗ ಶಾರ್ಟ್ ಸರ್ಕ್ಯೂಟ್ ನಿಂದ ಯುವತಿ ಕೂದಲಿಗೆ ಬೆಂಕಿ ತಗುಲಿದ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಮಹಿಳೆಯರ ಪಿಜಿಯಲ್ಲಿ ನಡೆದಿದೆ.

ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಶಾಂಭವಿ ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುರುವಾರ ಸ್ನಾನ ಮಾಡಿ ಕೆಲಸಕ್ಕೆ ಹೋಗುವ ಮೊದಲು ಹೇರ್ ಡ್ರೈಯರ್ ಮೂಲಕ ಕೂದಲು ಒಣಗಿಸುವ ವೇಳೆ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿ ಶಾಂಭವಿ ಅವರ ಕೂದಲಿಗೆ ತಾಗಿದ್ದು, ಅವರು ಆತಂಕದಿಂದ ಬೆಡ್ ಮೇಲೆ ಹೇರ್ ಡ್ರೈರ್ ಎಸೆದಿದ್ದಾರೆ. ಇದರ ಪರಿಣಾಮ ಪೀಠೋಪಕರಣಗಳು ಹಾಗೂ ಪಿಜಿಯಲ್ಲಿದ್ದ ಇತರೆ ವಸ್ತುಗಳಿಗೆ ಹಾನಿಯಾಗಿದೆ. ಶಾಂಭವಿ ಅವರ ನಿರ್ಲಕ್ಷ್ಯದಿಂದ ಪಿಜಿ ಪೀಠೋಪಕರಣಗಳಿಗೆ ಹಾನಿಯಾಗಿದೆ ಎಂದು ಮಾಲಿಕ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...