ಆಸ್ಸಾಂ ರಾಜ್ಯದ ಜಿಲ್ಲೆಯೊಂದರಲ್ಲಿ ಮೊದಲ ಮಹಿಳಾ ಮಾರುಕಟ್ಟೆಯನ್ನ ಆರಂಭಿಸಲಾಗಿದ್ದು ಈ ವಿಶೇಷ ಮಾರುಕಟ್ಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಮಾಮೋನಿ ರೈಸಮ್ ಗೋಸ್ವಾಮಿ ಹೆಸರನ್ನ ಇಡಲಾಗಿದೆ.
ಭಾರತ ಹಾಗೂ ಬಾಂಗ್ಲಾ ದೇಶ ಗಡಿಯಲ್ಲಿರುವ ಕಾಚರ್ ಜಿಲ್ಲೆಯಲ್ಲಿ ಈ ಮಾರುಕಟ್ಟೆಯನ್ನ ತೆರೆಯಲಾಗಿದೆ. ಜಿಲ್ಲಾಧಿಕಾರಿ ಕೀರ್ತಿ ಜಲ್ಲಿ ಈ ಮಾರುಕಟ್ಟೆಯನ್ನ ಲೋಕಾರ್ಪಣೆಗೊಳಿಸಿದ್ದು ಇದಕ್ಕೆ ಮಾಮೋನಿ ಬಜಾರ್ ಎಂದು ಹೆಸರಿಟ್ಟಿದ್ದಾರೆ.
ಈ ಮಾರುಕಟ್ಟೆಯಲ್ಲಿ ಕೇವಲ ಮಹಿಳಾ ವ್ಯಾಪರಸ್ಥರಿಗೆ ಮಾತ್ರ ಅವಕಾಶ ಇರಲಿದೆ. ಅಂದಹಾಗೆ ಆಸ್ಸಾಂನಲ್ಲಿ ಈ ರೀತಿ ಮಹಿಳಾ ಮಾರುಕಟ್ಟೆ ಸ್ಥಾಪನೆ ಆಗಿರೋದು ಇದೇ ಮೊದಲೇನಲ್ಲ. ಬರಾಕ್ ಕಣಿವೆಯಲ್ಲಿ ಮೊದಲ ಬಾರಿಗೆ ಈ ರೀತಿಯ ಮಾರುಕಟ್ಟೆ ತೆರೆಯಲಾಗಿತ್ತು. ಇದರ ಜೊತೆಯಲ್ಲಿ ದಿಬ್ರುಗರ್ ಹಾಗೂ ಜೋರ್ಹಟ್ನಲ್ಲೂ ಈ ರೀತಿಯ ಮಹಿಳಾ ಮಾರ್ಕೆಟ್ ಸ್ಥಾಪನೆಯಾಗಿದೆ.
ಆಸ್ಸಾಂನ ಮೊದಲ ಮಹಿಳಾ ಮಾರುಕಟ್ಟೆಯನ್ನ 2 ವರ್ಷಗಳ ಹೊಂದೆ ಮೊದಲ ಬಾರಿಗೆ ನಮ್ರೂಪ್ ಜಿಲ್ಲೆಯಲ್ಲಿ ಆರಂಭಿಸಲಾಗಿತ್ತು. ಇದಾದ ಬಳಿಕ ಮಣಿಪುರದಲ್ಲಿ ಕೂಡ ಮಹಿಳಾ ಮಾರ್ಕೆಟ್ ಆರಂಭವಾಗಿತ್ತು.