alex Certify ಕನಸಿನ ಬೈಕ್‌ ಖರೀದಿಸಲು ಉದ್ಯಮಿ ಮಾಡಿದ್ದಾನೆ ಇಂಥಾ ವಿಚಿತ್ರ ಕೆಲಸ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನ ಬೈಕ್‌ ಖರೀದಿಸಲು ಉದ್ಯಮಿ ಮಾಡಿದ್ದಾನೆ ಇಂಥಾ ವಿಚಿತ್ರ ಕೆಲಸ…!

ಕೆಲವರಿಗೆ ಬೈಕ್‌ ಕ್ರೇಝ್‌ ಎಷ್ಟಿರುತ್ತೆ ಅಂದ್ರೆ ಅದಕ್ಕಾಗಿ ಎಂಥಾ ಸಾಹಸ ಬೇಕಾದ್ರೂ ಮಾಡಲು ಸಿದ್ಧರಿರ್ತಾರೆ. ಅಸ್ಸಾಂನ ಕರೀಂಗಂಜ್ ಜಿಲ್ಲೆಯ ರಾಮಕೃಷ್ಣ ನಗರದಲ್ಲಿ ನೆಲೆಸಿರುವ ಉದ್ಯಮಿ ಸುರಂಜನ್ ರಾಯ್‌ಗೆ  TVS Apache RTR 160 4V ಬೈಕ್‌ ತುಂಬಾನೇ ಇಷ್ಟವಾಗಿತ್ತು. ಕೊನೆಗೂ ಕನಸಿನ ಬೈಕನ್ನು ಅವರು ಖರೀದಿಸಿದ್ದಾರೆ. ಆದ್ರೆ ನಾಣ್ಯಗಳನ್ನು ಪಾವತಿಸಿ ಬೈಕ್‌ ಕೊಂಡಿರೋದು ವಿಶೇಷ.

50ಸಾವಿರ ರೂಪಾಯಿ ಮೊತ್ತದ ನಾಣ್ಯಗಳನ್ನು ಸುರಂಜನ್‌ ಗೋಣಿಚೀಲಗಳಲ್ಲಿ ಶೋರೂಮ್‌ಗೆ ತಂದರು. ಬೈಕ್‌ ಖರೀದಿಸುವುದಾಗಿ ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ರು. ಆರಂಭದಲ್ಲಿ ಅವರು ನಂಬಲೇ ಇಲ್ಲ. ನಾಣ್ಯಗಳ ಚೀಲವನ್ನು ನೋಡಿದಾಗ ಎಲ್ಲರೂ ಆಶ್ಚರ್ಯಚಕಿತರಾದರು. ಸುರಂಜನ್‌ 50 ಸಾವಿರ ರೂಪಾಯಿಗಳನ್ನು ಮುಂಗಡ ಪಾವತಿಯಾಗಿ ನೀಡಿ, ಉಳಿದ ಮೊತ್ತಕ್ಕೆ ಮಾಡಿದ ಇಎಂಐ ಪಡೆದರು.

ಸಿಬ್ಬಂದಿ ನಾಣ್ಯ ಎಣಿಸುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅದರಲ್ಲಿ ಹೆಚ್ಚಾಗಿ 10 ರೂಪಾಯಿ ನಾಣ್ಯಗಳಿವೆ. ಸುರಂಜನ್ ಹೊಸ ಬೈಕ್ ಖರೀದಿಸುವ ಸಲುವಾಗಿಯೇ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದರು.  TVS Apache RTR 160 4V  ಬೈಕ್‌ 159.7cc ಸಿಂಗಲ್-ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 17.39bhp ಪವರ್ ಮತ್ತು 14.73Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

5 ಸ್ಪೀಡ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಬೈಕು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಪಡೆದರೆ ಹಿಂಭಾಗದಲ್ಲಿ ಮೊನೊ-ಶಾಕ್ ಇದೆ. ಇದು ಟ್ವಿನ್ ಡಿಆರ್‌ಎಲ್‌ನೊಂದಿಗೆ ಎಲ್‌ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ಯಾಂಪ್, ಎಬಿಎಸ್, ಕಂಪ್ಲೀಟ್ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್ ಮತ್ತು ಗ್ಲೈಡ್ ಥ್ರೂ ಟೆಕ್ನಾಲಜಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ನೈಟ್ ಬ್ಲಾಕ್, ಮೆಟಾಲಿಕ್ ಬ್ಲೂ ಮತ್ತು ರೇಸಿಂಗ್ ರೆಡ್ ಕಲರ್‌ನಲ್ಲಿ ಲಭ್ಯವಿದೆ. ಇದರಲ್ಲಿ ಮೂರು ವಿಭಿನ್ನ ರೈಡಿಂಗ್ ಮೋಡ್‌ಗಳಿವೆ. ಗೇರ್ ಶಿಫ್ಟ್ ಸೂಚಕ ಫೀಚರ್‌ ಕೂಡ ಇದೆ. ಇದಕ್ಕೆ ರೇಡಿಯಲ್ ಹಿಂಭಾಗದ ಟೈರ್ ಅಳವಡಿಸಲಾಗಿದೆ. ಇದರ ವಿಶೇಷ ಆವೃತ್ತಿಯು TVS SmartXonnect ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...