ಅಫ್ಘಾನಿಸ್ತಾನವು ತಾಲಿಬಾನಿಗಳ ವಶವಾದ ಬಳಿಕ ಅಲ್ಲಿರುವ ಸಾವಿರಾರು ಹತಾಶ ಜನರು ಸುರಕ್ಷಿತ ಸ್ಥಳಕ್ಕೆ ತೆರಳಲು ಹರಸಾಹಸ ಪಡ್ತಿದ್ದಾರೆ. ಅಪ್ಘನ್ನಲ್ಲಿ ಸಿಲುಕಿರುವ ಅನೇಕರು ಸೈನ್ಯದ ಸಹಾಯಕ್ಕಾಗಿ ಕಾಯುತ್ತಿದ್ದಾರೆ. ಅಪ್ಘನ್ನಲ್ಲಿ ಪರಿಸ್ಥಿತಿ ಸದ್ಯದ ಮಟ್ಟಿಗೆ ಎಷ್ಟು ನರಕ ಸದೃಶವಾಗಿದೆ ಅನ್ನೋದನ್ನ ಹಿರಿಯ ಬ್ರಿಟಿಷ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಬ್ರಿಟಿಷ್ ಹಿರಿಯ ಸೇನಾಧಿಕಾರಿಯೊಬ್ಬರು, ಸಹಾಯಕ್ಕಾಗಿ ಅಳುತ್ತಿರುವ ಮಹಿಳೆಯರು ರಾತ್ರಿಯಾಗುತ್ತಿದ್ದಂತೆಯೇ ಗಡಿಯಲ್ಲಿ ಮುಳ್ಳಿನ ತಂತಿಯ ಆಚೆಗೆ ತಮ್ಮ ಮಕ್ಕಳನ್ನು ಎಸೆಯುವ ಮೂಲಕ ಅವರನ್ನು ಹಿಡಿದುಕೊಳ್ಳಿ ಎಂದು ಸೈನಿಕರ ಬಳಿ ಹೇಳುತ್ತಾರೆ ಎಂದು ಹೇಳಿದ್ರು.
ಇದು ನಿಜಕ್ಕೂ ನರಕಸದೃಶವಾಗಿದೆ. ಮಹಿಳೆಯರು ತಮ್ಮ ಮಕ್ಕಳನ್ನು ಮುಳ್ಳಿನ ಬೇಲಿಯ ಮೇಲೆ ಎಸೆಯುತ್ತಿದ್ದಾರೆ. ಸೈನಿಕರ ಬಳಿ ಮಕ್ಕಳನ್ನು ಎತ್ತಿಕೊಳ್ಳುವಂತೆ ಹೇಳ್ತಿದ್ದಾರೆ. ಅನೇಕರು ತಂತಿಯ ನಡುವೆ ಸಿಲುಕಿದ್ದಾರೆ ಎಂದು ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನಿಗಳ ವಶವಾದ ಬಳಿಕ ಪರಿಸ್ಥಿತಿ ಎಷ್ಟು ಬಿಗಡಾಯಿಸಿದೆ ಅನ್ನೋದಕ್ಕೆ ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ ಘಟನೆಗಳೇ ಸಾಕ್ಷಿಯಾಗಿದೆ.