alex Certify ಉಜ್ಜಯಿನಿ ಮಹಾಕಾಲ್ ದೇಗುಲದಲ್ಲಿ ಮಹಿಳಾ ಸಿಬ್ಬಂದಿ ಡಾನ್ಸ್; ವಿಡಿಯೋ ವೈರಲ್ ಬಳಿಕ ಸಸ್ಪೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಜ್ಜಯಿನಿ ಮಹಾಕಾಲ್ ದೇಗುಲದಲ್ಲಿ ಮಹಿಳಾ ಸಿಬ್ಬಂದಿ ಡಾನ್ಸ್; ವಿಡಿಯೋ ವೈರಲ್ ಬಳಿಕ ಸಸ್ಪೆಂಡ್

ಉಜ್ಜಯಿನಿಯ ಮಹಾಕಾಲ್ ದೇಗುಲದಲ್ಲಿ ಮಹಿಳಾ ಭದ್ರತಾ ಸಿಬ್ಬಂದಿ ಬಾಲಿವುಡ್ ಚಿತ್ರದ ಗೀತೆಯೊಂದಕ್ಕೆ ಭರ್ಜರಿ ಡಾನ್ಸ್ ಮಾಡಿದ್ದು, ಈ ವಿಡಿಯೋ ವೈರಲ್ ಆದ ಬಳಿಕ ದೇಗುಲದ ಆಡಳಿತ ಮಂಡಳಿ ಇಬ್ಬರು ಮಹಿಳಾ ಭದ್ರತೆ ಸಿಬ್ಬಂದಿಯನ್ನು ಉದ್ಯೋಗದಿಂದ ಸಸ್ಪೆಂಡ್ ಮಾಡಿದೆ.

ವೈರಲ್ ವಿಡಿಯೋದಲ್ಲಿ ಕಪ್ಪು ಸಮವಸ್ತ್ರ ಧರಿಸಿರುವ ಇಬ್ಬರು ಮಹಿಳಾ ಸಿಬ್ಬಂದಿ ‘ಜೀನೇಕಿ ಬಹನೇ ಲಾಕೋ’ ಹಾಗೂ ‘ಪ್ಯಾರ್ ಪ್ಯಾರ್ ಕರ್ತೆ’ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಲೇ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ನೃತ್ಯ ಮಾಡಿದ್ದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಗಿದೆ. ಅಲ್ಲದೆ ಭಕ್ತರೂ ಸೇರಿದಂತೆ ಯಾರೊಬ್ಬರೂ ಸಹ ಮೊಬೈಲ್ ಫೋನ್ ಗಳನ್ನು ಕೊಂಡೊಯ್ಯದಂತೆ ಕಠಿಣ ನಿರ್ಬಂಧ ಹೇರಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...