alex Certify ರಾಜ್ಯದ ಮಹಿಳೆಯರೇ ಗಮನಿಸಿ : ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಸಲ್ಲಿಸಲು ಜ. 31 ಕೊನೆಯ ದಿನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದ ಮಹಿಳೆಯರೇ ಗಮನಿಸಿ : ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಸಲ್ಲಿಸಲು ಜ. 31 ಕೊನೆಯ ದಿನ

ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಯಾಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ʼಉದ್ಯಮಶೀಲತಾ ತರಬೇತಿʼಗೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ಇದೇ ಜನವರಿ 31ರ ಒಳಗಾಗಿ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ಜಾಲತಾಣ https://swdservices.karnataka.gov.in/ ಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯಮ ಆರಂಭಿಸಲು ಸಹಕಾರಿಯಾಗುವಂತೆ ಐಐಎಂ-ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ‘ಉದ್ಯಮಶೀಲತಾ ತರಬೇತಿ’ಗೆ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ :

– ಶೇ.100 ರಷ್ಟು ಕಡ್ಡಾಯ ಹಾಜರಾತಿಯೊಂದಿಗೆ 5-6 ತಿಂಗಳುಗಳ ತರಬೇತಿ

– ತರಬೇತಿ ಸಮಯದಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯ

– ತರಬೇತಿ ಪೂರೈಸಿ ಪ್ರಮಾಣಪತ್ರ ಪಡೆದ ಅಭ್ಯರ್ಥಿಗಳಿಗೆ ರೂ.10,000 ಗಳ ಶಿಷ್ಯವೇತನ

ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು :

– ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಾಗಿರಬೇಕು

– 21 ರಿಂದ 45ರ ಒಳಗಿನ ವಯೋಮಾನದವರಾಗಿರಬೇಕು

– ಸ್ವಂತ ಉದ್ದಿಮೆ ಸ್ಥಾಪಿಸುವ ಉದ್ದೇಶ ಹೊಂದಿರಬೇಕು

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...