alex Certify ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಬರುತ್ತೆ ವಿಪರೀತ ಸಿಟ್ಟು; ಕೋಪ ನಿಯಂತ್ರಿಸಲು ಇಲ್ಲಿದೆ ಟಿಪ್ಸ್‌….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಬರುತ್ತೆ ವಿಪರೀತ ಸಿಟ್ಟು; ಕೋಪ ನಿಯಂತ್ರಿಸಲು ಇಲ್ಲಿದೆ ಟಿಪ್ಸ್‌….!

ಪ್ರತಿ ತಿಂಗಳು ಮುಟ್ಟಿನ ಸಮಯದಲ್ಲಿ ಮಹಿಳೆಯರ ಮೂಡ್ ತುಂಬಾನೇ ಬದಲಾಗುತ್ತದೆ. ಒಮ್ಮೊಮ್ಮೆ ತುಂಬಾ ಖುಷಿಯಾಗಿದ್ರೆ ಮತ್ತೆ ಕೆಲವೊಮ್ಮೆ ಕಾರಣವಿಲ್ಲದೆ ಸಿಟ್ಟು ಮಾಡಿಕೊಳ್ಳುತ್ತಾರೆ. ಇದೆಲ್ಲಾ ದೇಹದಲ್ಲಿ ಹಾರ್ಮೋನ್ ಬದಲಾವಣೆಯಿಂದ ಆಗುತ್ತದೆ. ಪ್ರೊಜೆಸ್ಟರಾನ್ ಮತ್ತು ಈಸ್ಟ್ರೊಜೆನ್ ಎಂಬ ಹಾರ್ಮೋನುಗಳು ಮುಟ್ಟಿನ ಸಮಯದಲ್ಲಿ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿಯೇ ಹುಡುಗಿಯರ ಮೂಡ್ ಮತ್ತೆ ಮತ್ತೆ ಬದಲಾಗುತ್ತಲೇ ಇರುತ್ತದೆ.

ಮುಟ್ಟಿನ ಸಮಯದಲ್ಲಿ ಈ ಹಾರ್ಮೋನುಗಳ ಮಟ್ಟವು ಅಸ್ಥಿರವಾಗುತ್ತದೆ. ಇದರಿಂದಾಗಿ ಮಹಿಳೆಯರು ಹೆಚ್ಚು ಕೋಪಗೊಳ್ಳುತ್ತಾರೆ. ಋತುಚಕ್ರದ ಸಮಯದಲ್ಲಿ ಮಹಿಳೆಯರು ಹೊಟ್ಟೆ ನೋವು ಮತ್ತು ಸೆಳೆತದಿಂದ ಬಳಲುತ್ತಾರೆ. ಈ ರೀತಿಯ ದೈಹಿಕ ಅಸ್ವಸ್ಥತೆ ಕೂಡ ವಿಪರೀತ ಕೋಪಕ್ಕೆ ಕಾರಣವಾಗುತ್ತದೆ. ಮೂರನೆಯ ಕಾರಣವೆಂದರೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅಹಿತಕರ ಭಾವನೆ. ನಾಲ್ಕನೇ ಕಾರಣವೆಂದರೆ ನಿದ್ರೆಯ ಕೊರತೆ. ಈ ಎಲ್ಲಾ ಕಾರಣಗಳಿಂದ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರು ಹೆಚ್ಚು ಕೋಪಗೊಳ್ಳುತ್ತಾರೆ.

ಮುಟ್ಟಿನ ಸಮಯದಲ್ಲಿ ಕಾಡುವ ಸಿಟ್ಟು, ಅಸಮಾಧಾನವನ್ನು ನಿಯಂತ್ರಿಸಲು ಅನೇಕ ಸುಲಭದ ಮಾರ್ಗಗಳಿವೆ. ದಿನನಿತ್ಯದ ವ್ಯಾಯಾಮ ಮತ್ತು ಧ್ಯಾನವು ದೇಹದ ಹಾರ್ಮೋನ್‌ಗಳನ್ನು ಸುಧಾರಿಸುತ್ತದೆ. ಇದು ಮೂಡ್ ಅನ್ನು ಸಹ ಉತ್ತಮವಾಗಿ ಇರಿಸುತ್ತದೆ. ಕನಿಷ್ಠ 30 ನಿಮಿಷಗಳ ನಡಿಗೆ ಅಥವಾ ಬಿಸಿಲಿನಲ್ಲಿ ಓಡುವಂತಹ ಲಘು ವ್ಯಾಯಾಮವನ್ನು ಮಾಡಿ. ಇದರಿಂದ ದೇಹ ಫಿಟ್ ಆಗಿರುತ್ತದೆ.

ಪಿರಿಯಡ್ಸ್ ಎಂದರೆ ಎಲ್ಲಾ ಸಮಯದಲ್ಲೂ ಹಾಸಿಗೆಯ ಮೇಲೆಯೇ ಇರಬೇಕೆಂದು ಅರ್ಥವಲ್ಲ. ಸೋಮಾರಿತನ ಕೂಡ ಮೂಡ್ ಸ್ವಿಂಗ್‌ಗಳನ್ನು ಉಂಟುಮಾಡುತ್ತದೆ. ಹಾಗಾಗಿ ಪಿರಿಯಡ್ಸ್ ಸಮಯದಲ್ಲಿ ಸಹ ನೀವು ಹೊರಗೆ ಹೋಗಬಹುದು. ವಾಕಿಂಗ್‌ ಅಥವಾ ಸ್ನೇಹಿತರನ್ನು ಭೇಟಿ ಮಾಡಬಹುದು. ಇದು ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಮೂಡ್‌ ಸ್ವಿಂಗ್‌ ಕೂಡ ಕಡಿಮೆಯಾಗುತ್ತದೆ.

ಪಿರಿಯಡ್ಸ್ ಸಮಯದಲ್ಲಿ ನಾವು ಮನರಂಜನೆಗಾಗಿ ಪಿಜ್ಜಾ, ಬರ್ಗರ್, ಕೇಕ್ ಮುಂತಾದ ಜಂಕ್ ಫುಡ್‌ಗಳನ್ನು ತಿನ್ನಲು ಪ್ರಯತ್ನಿಸುತ್ತೇವೆ. ಆದರೆ ಋತುಚಕ್ರದಲ್ಲಿ ಜಂಕ್ ಫುಡ್ ಸೇವಿಸಿದರೆ ದೇಹದಲ್ಲಿ ದ್ರವದ ಧಾರಣವು ಬಹಳಷ್ಟು ಹೆಚ್ಚಾಗುತ್ತದೆ. ಇದು ಊತ, ತೂಕ ಹೆಚ್ಚಾಗುವುದು ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಆರೋಗ್ಯಕರ ಆಹಾರ ಸೇವಿಸುವುದು ಅವಶ್ಯಕ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...