ತಾಯಿಯಾಗಬೇಕೆಂಬ ಹಂಬಲ ಎಲ್ಲಾ ಮಹಿಳೆಯರಿಗೆ ಇರುತ್ತದೆ. ಆದರೆ ಕೆಲವರಿಗೆ ಗರ್ಭಕೋಶ ಹಾಗೂ ಇನ್ನಿತರ ಸಮಸ್ಯೆಗಳಿಂದ ಮಕ್ಕಳಾಗುವುದಿಲ್ಲ. ಹಾಗಾಗಿ ಮಕ್ಕಳು ಬೇಕೆಂದು ಬಯಸುವ ಮಹಿಳೆಯರ ಜೊತೆಗೆ ಪುರುಷರು ಕೂಡ ಈ ಆಹಾರಗಳನ್ನು ಸೇವಿಸಿ.
*ತಾಯಿಯಾಗಲು ಬಯಸುವವರು ತಮ್ಮ ಆಹಾರದ ಕಡೆಗೆ ಹೆಚ್ಚು ಗಮನ ಕೊಡಬೇಕು. ಪುರುಷರು ಹಾಗೂ ಮಹಿಳೆಯರು ಹೆಚ್ಚು ಪ್ರೋಟೀನ್, ಕಡಿಮೆ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್ ಆಹಾರವನ್ನು ಬಳಸಿ.
*ಸಸ್ಯ ಆಧರಿತ ಆಹಾರಗಳನ್ನು ಸೇವಿಸಿ. ಇದು ಈಸ್ಟ್ರೋಜನ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಸೊಪ್ಪುಗಳು, ಬೀನ್ಸ್, ದ್ವಿದಳ ಧಾನ್ಯಗಳು ಮುಂತಾದವುಗಳನ್ನು ಹೆಚ್ಚಾಗಿ ಸೇವಿಸಿ.
*ಸೂರ್ಯಕಾಂತಿ ಬೀಜಗಳಲ್ಲಿರುವ ಪೋಷಕಾಂಶ ಪುರುಷರ ವೀರ್ಯ ಪ್ರಮಾಣ ಹಾಗೂ ಚಲನೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಹೆಚ್ಚಾಗಿ ಬಳಸಿ.
*ದಾಲ್ಚಿನ್ನಿ ಮಹಿಳೆಯರ ಹಾರ್ಮೋನ್ ಸಮಸ್ಯೆಯನ್ನು ನಿವಾರಿಸುತ್ತದೆ. ಅವಧಿಗಳನ್ನು ಸರಿಯಾದ ಸಮಯದಲ್ಲಿ ಆಗುವಂತೆ ಮಾಡುತ್ತದೆ.
*ಡೈರಿ ಪ್ರೊಡಕ್ಟ್ ಗಳಾದ ಹಾಲು, ಮೊಸರು, ಬೆಣ್ಣೆ, ಮುಂತಾದವುಗಳನ್ನು ಪ್ರತಿ ದಿನದ ಆಹಾರದಲ್ಲಿ ಬಳಸಿ. ಇದು ನಿಮ್ಮ ಫಲವತ್ತತೆಯನ್ನು ಹೆಚ್ಚಿಸುತ್ತದೆ.