alex Certify ಚಳಿಗೆ ಫ್ರೀಜ್​ ಆದ ಟೆಸ್ಲಾ ಕಾರಿನ ಬಾಗಿಲು: ದಂಪತಿ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗೆ ಫ್ರೀಜ್​ ಆದ ಟೆಸ್ಲಾ ಕಾರಿನ ಬಾಗಿಲು: ದಂಪತಿ ಪರದಾಟ

ತಣ್ಣನೆಯ ಹವಾಮಾನದ ಹೊರಗೆ ಹೋಗುವ ಬದಲು ಕಾರಿನಲ್ಲಿ ಕುಳಿತುಕೊಳ್ಳುವುದೇ ಬೆಸ್ಟ್​ ಎಂದು ಹಲವರು ಎಂದುಕೊಳ್ಳುತ್ತಾರೆ. ಇಲ್ಲೊಂದು ಘಟನೆಯಲ್ಲಿ ಟೆಸ್ಲಾ ಕಾರಿನ ಮಾಲೀಕರು ಕಾರಿನಲ್ಲಿ ಕುಳಿತುಕೊಳ್ಳಲು ಹೋಗಿ ಪೇಚಿಗೆ ಸಿಲುಕಿದರು. ಇದಕ್ಕೆ ಕಾರಣ ಅವರ ಕಾರಿನ  ಹ್ಯಾಂಡಲ್​ ಫ್ರೀಜ್​ ಆಗಿತ್ತು.

ತಮ್ಮ ಕಾರನ್ನು ಅನ್​ಲಾಕ್​ ಮಾಡಲು ಸಾಧ್ಯವಾಗದಾಗ ಅವರು ಈ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಕಾರನ್ನು ಅನ್​ಲಾಕ್​ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ, ಶೀತಗಾಳಿಗೆ ನಲುಗಿರುವ ಅಮೆರಿಕದಲ್ಲಿ ನಡೆದಿರುವ ಘಟನೆ ಇದು.

ಈ ಕಾರನ್ನು ಅನ್​ಲಾಕ್​ ಮಾಡಲು ಟ್ವಿಟ್ಟರ್ ಬಳಕೆದಾರರು ತಮ್ಮದೇ ಆದ ರೀತಿಯಲ್ಲಿ ಸಲಹೆ ನೀಡಿದ್ದಾರೆ. ಹ್ಯಾಂಡಲ್‌ಗಳನ್ನು ಬಳಸುವ ಅಗತ್ಯವಿಲ್ಲದೇ ಡೋರ್ ಅನ್ನು ಅನ್‌ಲಾಕ್ ಮಾಡುವ ವೈಶಿಷ್ಟ್ಯವನ್ನು ಟೆಸ್ಲಾ ಅಪ್ಲಿಕೇಶನ್ ಹೊಂದಿದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ.

ಅಂತಹ ಚಳಿಗಾಲದ ತೊಂದರೆಗಳನ್ನು ತಪ್ಪಿಸಲು ಇತರರು ಬೆಚ್ಚಗಿನ ಗ್ಯಾರೇಜ್​ನಲ್ಲಿ ಕಾರನ್ನು ನಿಲ್ಲಿಸಲು ಸಲಹೆ ನೀಡಿದ್ದಾರೆ. ಇದು ವಿನ್ಯಾಸ ದೋಷ ಎಂದು ಇನ್ನು ಕೆಲವರು ಹೇಳಿದ್ದಾರೆ. ಕೊನೆಗೂ ಅವರ ಕಾರಿನ ಬಾಗಿಲು ತೆರೆದುಕೊಂಡಿತೆ ಇಲ್ಲವೆ ತಿಳಿದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...