alex Certify ಮನೆ ಮಾರಾಟಕ್ಕಿಟ್ಟ ಮಹಿಳೆಯಿಂದ ಹೊಸ ರೀತಿ ಜಾಹೀರಾತು; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮಾರಾಟಕ್ಕಿಟ್ಟ ಮಹಿಳೆಯಿಂದ ಹೊಸ ರೀತಿ ಜಾಹೀರಾತು; ವಿಡಿಯೋ ವೈರಲ್

ಆನ್ಲೈನ್‌ನಲ್ಲಿ ಆಸ್ತಿ ಮಾರಾಟದ ಪಟ್ಟಿಯನ್ನು ಬಹಳ ಎಂಗೇಜಿಂಗ್ ಆಗಿ ತೋರಿಸುವುದು ಹೇಗೆ ಎಂದು ತೋರಿಸಿಕೊಟ್ಟಿರುವ ಮಹಿಳೆಯೊಬ್ಬರು ತಮ್ಮ ಆಸ್ತಿಯ ವಿಡಿಯೋಗೆ ಸಂಗೀತದ ಟಚ್‌ ಕೊಟ್ಟು ಜಾಹೀರಾತು ಮಾಡಿದ್ದಾರೆ.

ಈ ಸೇಲ್ಸ್‌ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಹೊಸ ಟ್ರೆಂಡ್ ಒಂದಕ್ಕೆ ಈ ಮಹಿಳೆ ನಾಂದಿ ಹಾಡಬಹುದು ಎಂದಿದ್ದಾರೆ. ’ಎಂದೂ ಮುಗಿಯದ ಆಸ್ತಿ’ ಎಂದು ತನ್ನ ಮನೆಯನ್ನು ಕರೆಯುವ ಮಹಿಳೆ, ಹಾಡು ಹೇಳುತ್ತಾ ಮನೆಯನ್ನೆಲ್ಲಾ ಪರಿಚಯಿಸುವ ಈ ವಿಡಿಯೋ ಹಾಗೇ ಸಂಗೀತದ ಎಫೆಕ್ಟ್‌ ಕೊಡಲಾಗಿದೆ.

ಬೆಳೆದು ನಿಂತ ಮಕ್ಕಳಿರುವ ಕುಟುಂಬಗಳೂ ಸಹ ಈ ಮನೆಯಲ್ಲಿ ಆರಾಮವಾಗಿ ವಾಸಿಸಬಹುದು ಎಂದು ಇದೇ ವಿಡಿಯೋದಲ್ಲಿ ಮಹಿಳೆ ತಿಳಿಸುತ್ತಾರೆ. ಮಾಸ್‌ಎರ್‌ ಬೆಡ್‌ರೂಂ, ಲಿವಿಂಗ್ ರೂಂ, ಅಡುಗೆ ಮನೆಯನ್ನೆಲ್ಲಾ ತೋರುವ ಮಹಿಳೆ, ಕೊನೆಗೆ ಮನೆಯ ಉದ್ಯಾನವನ್ನು ತೋರುವ ಮೂಲಕ ವಿಡಿಯೋಗೆ ಅಂತ್ಯ ಹಾಡುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...