ಆನ್ಲೈನ್‌ನಲ್ಲಿ ಆಸ್ತಿ ಮಾರಾಟದ ಪಟ್ಟಿಯನ್ನು ಬಹಳ ಎಂಗೇಜಿಂಗ್ ಆಗಿ ತೋರಿಸುವುದು ಹೇಗೆ ಎಂದು ತೋರಿಸಿಕೊಟ್ಟಿರುವ ಮಹಿಳೆಯೊಬ್ಬರು ತಮ್ಮ ಆಸ್ತಿಯ ವಿಡಿಯೋಗೆ ಸಂಗೀತದ ಟಚ್ ಕೊಟ್ಟು ಜಾಹೀರಾತು ಮಾಡಿದ್ದಾರೆ.
ಈ ಸೇಲ್ಸ್ ವಿಡಿಯೋ ಟ್ವಿಟರ್‌ನಲ್ಲಿ ವೈರಲ್ ಆಗಿದ್ದು, ಇದನ್ನು ಕಂಡ ನೆಟ್ಟಿಗರು ಹೊಸ ಟ್ರೆಂಡ್ ಒಂದಕ್ಕೆ ಈ ಮಹಿಳೆ ನಾಂದಿ ಹಾಡಬಹುದು ಎಂದಿದ್ದಾರೆ. ’ಎಂದೂ ಮುಗಿಯದ ಆಸ್ತಿ’ ಎಂದು ತನ್ನ ಮನೆಯನ್ನು ಕರೆಯುವ ಮಹಿಳೆ, ಹಾಡು ಹೇಳುತ್ತಾ ಮನೆಯನ್ನೆಲ್ಲಾ ಪರಿಚಯಿಸುವ ಈ ವಿಡಿಯೋ ಹಾಗೇ ಸಂಗೀತದ ಎಫೆಕ್ಟ್ ಕೊಡಲಾಗಿದೆ.
ಬೆಳೆದು ನಿಂತ ಮಕ್ಕಳಿರುವ ಕುಟುಂಬಗಳೂ ಸಹ ಈ ಮನೆಯಲ್ಲಿ ಆರಾಮವಾಗಿ ವಾಸಿಸಬಹುದು ಎಂದು ಇದೇ ವಿಡಿಯೋದಲ್ಲಿ ಮಹಿಳೆ ತಿಳಿಸುತ್ತಾರೆ. ಮಾಸ್‌ಎರ್ ಬೆಡ್‌ರೂಂ, ಲಿವಿಂಗ್ ರೂಂ, ಅಡುಗೆ ಮನೆಯನ್ನೆಲ್ಲಾ ತೋರುವ ಮಹಿಳೆ, ಕೊನೆಗೆ ಮನೆಯ ಉದ್ಯಾನವನ್ನು ತೋರುವ ಮೂಲಕ ವಿಡಿಯೋಗೆ ಅಂತ್ಯ ಹಾಡುತ್ತಾರೆ.
https://twitter.com/TSting18/status/1639185122023940099?ref_src=twsrc%5Etfw%7Ctwcamp%5Etweetembed%7Ctwterm%5E1639185122023940099%7Ctwgr%5Edc5f1eaa12ce83a31c1f8c2baf1147d7cf504482%7Ctwcon%5Es1_&ref_url=https%3A%2F%2Fwww.news18.com%2Fbuzz%2Fwomans-musical-touch-in-property-sales-video-makes-twitter-wonder-next-big-trend-7388449.html