alex Certify ಮುತ್ತಜ್ಜನಿಗೆ ಜನ್ಮದಿನದ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ ಮಹಿಳೆಗೆ ಕಾದಿತ್ತು ಅಚ್ಚರಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುತ್ತಜ್ಜನಿಗೆ ಜನ್ಮದಿನದ ಶುಭಾಶಯ ತಿಳಿಸಿ ಟ್ವೀಟ್ ಮಾಡಿದ ಮಹಿಳೆಗೆ ಕಾದಿತ್ತು ಅಚ್ಚರಿ…..!

ಟ್ವಿಟ್ಟರ್ ಬಳಕೆದಾರರೊಬ್ಬರ ಪೋಸ್ಟ್ ತನ್ನ ಮುತ್ತಜ್ಜನ 100 ನೇ ಜನ್ಮದಿನದಂದು ಮೈಕ್ರೋ-ಬ್ಲಾಗಿಂಗ್ ಸೈಟ್‌ನಲ್ಲಿ ಭಾರಿ ಅಲೆಯನ್ನೇ ಸೃಷ್ಟಿಸಿದೆ. ತನ್ನ ಮುತ್ತಜ್ಜನ ಹುಟ್ಟುಹಬ್ಬದ ಸರಳ ಪೋಸ್ಟ್, ಲಕ್ಷಾಂತರ ಜನರು ತಮ್ಮ ಅಜ್ಜ ಮತ್ತು ಅಜ್ಜಿಯರ ಚಿತ್ರಗಳನ್ನು ಹಂಚಿಕೊಳ್ಳಲು ಕಾರಣವಾಗುತ್ತದೆ ಎಂದು ಬಳಕೆದಾರರು ಎಂದಿಗೂ ಯೋಚಿಸಿರಲಿಲ್ಲ.

‘ನನ್ನ ಮುತ್ತಜ್ಜನಿಗೆ ಇಂದು 100 ವರ್ಷ ಮತ್ತು ಇನ್ನೂ ಅದ್ಭುತವಾಗಿದೆ’ ಎಂದು ಟ್ವಿಟ್ಟರ್ ಬಳಕೆದಾರರು ಶನಿವಾರ ಪೋಸ್ಟ್ ಮಾಡಿದ್ದಾರೆ. ಆದರೆ ಯಾವ ಚಂಡಮಾರುತವೇ ಅಪ್ಪಳಿಸುತ್ತದೆ ಅಂದು ಅವರು ಅಂದುಕೊಂಡಿರಲಿಲ್ಲ ಅನ್ಸುತ್ತೆ. ಯಾಕೆಂದರೆ, ಪೋಸ್ಟ್ ಸುಮಾರು 2.70 ಲಕ್ಷ ಲೈಕ್ಸ್ ಮತ್ತು ಸುಮಾರು 16,000 ರಿಟ್ವೀಟ್‌ಗಳನ್ನು ಸಂಗ್ರಹಿಸಿದೆ. ಬಳಕೆದಾರರ ಮುತ್ತಜ್ಜನ ಸುಂದರವಾದ ಚಿತ್ರವನ್ನು ನೋಡಿದ ಜನರು ತಮ್ಮ ಪ್ರೀತಿಪಾತ್ರರ ಅಜ್ಜ-ಅಜ್ಜಿಯರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಬಳಕೆದಾರ ಚಾಟಿ ಕ್ಯಾಥಿ ತನ್ನ 94 ವರ್ಷದ ತಾಯಿಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ತಮ್ಮ 103 ವರ್ಷದ ಅಜ್ಜಿಯ ಪುಟ್ಟ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಒಬ್ಬ ಬಳಕೆದಾರನು ತನ್ನ 96 ವರ್ಷದ ತಾಯಿಯಿಂದ ಬಳಕೆದಾರರ ಮುತ್ತಜ್ಜನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕಳುಹಿಸಿದ್ದಾನೆ.

ತನ್ನ ಮುತ್ತಜ್ಜನ ಹುಟ್ಟುಹಬ್ಬದ ಪೋಸ್ಟ್‌ಗೆ ಇಷ್ಟೊಂದು ಅಗಾಧ ಪ್ರತಿಕ್ರಿಯೆ ಸಿಗುತ್ತದೆ ಎಂದು ಅವಳು ಊಹಿಸಿರಲಿಲ್ಲ. ತನಗೆ ಮೀಸಲಾದ ಹುಟ್ಟುಹಬ್ಬದ ಪೋಸ್ಟ್ ಅನ್ನು ಲಕ್ಷಗಟ್ಟಲೆ ಜನರು ಇಷ್ಟಪಟ್ಟಿದ್ದಾರೆ ಎಂದು ತಿಳಿದು ಆಕೆಯ ಮುತ್ತಜ್ಜ ಕೂಡ ಆಶ್ಚರ್ಯಚಕಿತರಾಗಿದ್ದಾರೆ. ಹುಟ್ಟುಹಬ್ಬದ ಶುಭಾಶಯಗಳಿಗೆ ಧನ್ಯವಾದ ಹೇಳಿದ್ದಾರೆ.

— m. (@maiyasaidwhat) October 23, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...