alex Certify ಒಂದೇ ಶರ್ಟ್‌ ನಲ್ಲಿ 264 ಬಾರಿ ಜೂಮ್‌ ಮೀಟಿಂಗ್‌ ನಲ್ಲಿ ಮಹಿಳೆ ಭಾಗಿ….! ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಶರ್ಟ್‌ ನಲ್ಲಿ 264 ಬಾರಿ ಜೂಮ್‌ ಮೀಟಿಂಗ್‌ ನಲ್ಲಿ ಮಹಿಳೆ ಭಾಗಿ….! ವಿಡಿಯೋ ವೈರಲ್

ಕೊರೊನಾ ವೈರಸ್​​ನಿಂದಾಗಿ ವರ್ಕ್​ ಫ್ರಮ್​ ಹೋಮ್​ ಸಾಮಾನ್ಯ ಎಂಬಂತಾಗಿದೆ. ಹೀಗಾಗಿ ಜೂಮ್​ ಕಾಲ್​ ಮೂಲಕವೇ ಸಹೋದ್ಯೋಗಿಯ ಜೊತೆ ಮಾತುಕತೆ ನಡೆಸಬೇಕಾಗಿ ಬಂದಿದೆ. ಇದೇ ವಿಚಾರವಾಗಿ ಮಹಿಳೆಯೊಬ್ಬರು ವಿಚಿತ್ರ ವಿಚಾರವೊಂದನ್ನ ಶೇರ್​ ಮಾಡಿದ್ದಾರೆ.

ಈ ಮಹಿಳೆಯು ಬರೋಬ್ಬರಿ 264 ದಿನಗಳ ಕಾಲ ಒಂದೇ ಶರ್ಟ್​ ಧರಿಸಿ ಜೂಮ್​ ಮೀಟಿಂಗ್​​ನಲ್ಲಿ ಭಾಗಿಯಾಗಿದ್ದಾಳೆ. ವಿಶೇಷ ಅಂದರೆ ಇದನ್ನ ಕಂಪನಿಯ ಯಾವೊಬ್ಬ ಸಹೋದ್ಯೋಗಿಯೂ ಗಮನಿಸಿಲ್ಲವಂತೆ.

ಈ ವಿಚಾರವನ್ನ ಮಹಿಳೆ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಬರೋಬ್ಬರಿ 15 ತಿಂಗಳುಗಳ ಕಾಲ ತಾವು ಒಂದೇ ಶರ್ಟ್ ಧರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಇನ್ನಾದರೂ ಯಾರಾದರೂ ಇದನ್ನ ಗಮನಿಸುತ್ತಾರಾ ಎಂಬ ಉತ್ಸಾಹದಲ್ಲಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...