ಉತ್ಸಾಹದಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ಮಹಿಳೆ, ಅಲ್ಲಿದ್ದ ಉಪಕರಣದಲ್ಲಿ ತಲೆ ಕೆಳಗಾಗಿದ್ದ ಸಂದರ್ಭದಲ್ಲಿ ಸಿಲುಕಿಕೊಂಡು ಅತಂತ್ರಗೊಂಡಿದ್ದು, ರಕ್ಷಣೆಗಾಗಿ ಪೊಲೀಸರ ನೆರವು ಕೋರಿದ ಪ್ರಸಂಗವೊಂದು ನಡೆದಿದೆ.
ಓಹಿಯೋ ಮೂಲದ ಕ್ರಿಸ್ಟಿನ್ ಫಾಲ್ಡ್ ಅವರು ಜಿಮ್ ಉಪಕರಣಗಳಲ್ಲಿ ತಲೆಕೆಳಗಾಗಿ ಸಿಲುಕಿಕೊಂಡ ನಂತರ 911ಗೆ ಕರೆ ಮಾಡಿದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊ ಕ್ರಿಸ್ಟಿನ್ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ತಲೆಕೆಳಗಾಗಿ ನೇತಾಡುತ್ತಿರುವುದನ್ನು ತೋರಿಸುತ್ತದೆ. ಕ್ರಿಸ್ಟಿನ್ ಸಮಸ್ಯೆಯನ್ನು ಅರಿತುಕೊಂಡಾಗ, ಅವರು ತಕ್ಷಣದ ಸಹಾಯಕ್ಕಾಗಿ 911 ಗೆ ಕರೆ ಮಾಡಬೇಕಾಯಿತು.
ಕ್ರಿಸ್ಟಿನ್ ಸಹಾಯಕ್ಕಾಗಿ ಜೇಸನ್ ಎಂಬ ಜಿಮ್ನಲ್ಲಿದ್ದ ವ್ಯಕ್ತಿಗೆ ಕರೆ ಮಾಡುತ್ತಾರೆ. ಆದರೆ ಜೋರಾಗಿ ಹಾಕಲಾಗಿದ್ದ ಮ್ಯೂಸಿಕ್ನಿಂದ ಜೇಸನ್ಗೆ ಕೂಗು ಕೇಳಿರಲಿಲ್ಲ. ಆಕೆಗೆ ಕೇವಲ ಒಂದು ಆಯ್ಕೆ ಉಳಿದಿತ್ತು, ಹೀಗಾಗಿ 911ಕ್ಕೆ ಸ್ಮಾರ್ಟ್ ವಾಚ್ ಮೂಲಕ ಕರೆ ಮಾಡಿದ್ದಾರೆ.
ನಾನು ಜಿಮ್ನಲ್ಲಿ ಸಿಲುಕಿಕೊಂಡಿದ್ದೇನೆ, ಯಾರ ಗಮನವನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ, ನಾನು ತಲೆಕೆಳಗಾಗಿ ಸಿಲುಕಿಕೊಂಡಿದ್ದೇನೆ ಎಂದು ಆಕೆ ಹೇಳಿಕೊಂಡಿದ್ದು, ಕ್ರಿಸ್ಟಿನ್, 911 ಗೆ ಕರೆ ಮಾಡಿದ ಕೆಲವು ನಿಮಿಷಗಳ ನಂತರ ಅಧಿಕಾರಿಯೊಬ್ಬರು ಆಗಮಿಸಿ ಸಹಾಯ ಮಾಡಿದರು.