alex Certify ಮನೆ ಚಿಮಣಿಯೊಳಗೆ ಸಿಲುಕಿ ಪರದಾಡಿದ ಯುವತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಚಿಮಣಿಯೊಳಗೆ ಸಿಲುಕಿ ಪರದಾಡಿದ ಯುವತಿ…!

ಮನೆಯಿಂದ ಹೊರಗೆ ಹೊರಡುವ ಗಡಿಬಿಡಿಯಲ್ಲಿ ಕೆಲವೊಮ್ಮೆ ಮನೆಯ ಕೀಗಳನ್ನೇ ಮರೆತುಬಿಡ್ತೇವೆ. ಈ ರೀತಿ ಆಗಬಾರದು ಅಂತಾ ಕೆಲವರು ಎಕ್ಸ್ಟ್ರಾ ಕೀಗಳನ್ನ ಪರ್ಸ್​ನಲ್ಲಿ ಇಟ್ಟುಕೊಂಡುಬಿರ್ತಾರೆ. ಆದರೆ ನೆವಾಡಾದ ಯುವತಿಯೊಬ್ಬಳು ಮನೆಯೊಳಗೆ ಇಟ್ಟ ಕೀಗಳನ್ನ ಪಡೆಯಲು ಮಾಡಿದ ಪ್ಲಾನ್​ನಿಂದಾಗಿ ಪೇಚಿಗೆ ಸಿಲುಕಿದ್ದಾಳೆ .

ಮನೆಯ ಒಳಗೆ ಕೀಯನ್ನ ಬಿಟ್ಟಿದ್ದ ಯುವತಿ ಹೊರಗಡೆಯಿಂದ ಮನೆ ಬಾಗಿಲನ್ನ ಲಾಕ್​ ಮಾಡಿ ತೆರಳಿದ್ದಳು. ವಾಪಸ್​ ಮನೆಗೆ ಬಂದಾಗ ತನ್ನ ಬಳಿ ಕೀ ಇಲ್ಲ ಎಂಬ ವಿಚಾರ ಆಕೆಗೆ ಮನವರಿಕೆ ಆಗಿದೆ. ಬೀಗದ ಕೈ ಮುರಿಯಲು ಬೇರೆ ವ್ಯಕ್ತಿಯನ್ನ ಕರೆಯುವ ಬದಲು ಈಕೆ ಮನೆಯ ಚಿಮಣಿಯ ಮೂಲಕ ಮನೆ ಒಳಗೆ ಹೊಕ್ಕಲು ಪ್ಲಾನ್​ ಮಾಡಿದ್ದಾರೆ.

ಚಿಮಣಿಯಿಂದ ಹೊಕ್ಕುವ ಈಕೆಯ ಐಡಿಯಾ ಫಲಿಸಲಿಲ್ಲ. ಬದಲಾಗಿ ಈಕೆ ಚಿಮಣಿಯ ಮಧ್ಯದಲ್ಲೇ ಸಿಲುಕಿಕೊಂಡಿದ್ದಾಳೆ. ಕೊನೆಗೆ ಈಕೆಯನ್ನ ಪಾರು ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಘಟನೆಯನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಶಾಕ್​ ಆಗಿದ್ದಾರೆ .

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...