ಮನೆಯಿಂದ ಹೊರಗೆ ಹೊರಡುವ ಗಡಿಬಿಡಿಯಲ್ಲಿ ಕೆಲವೊಮ್ಮೆ ಮನೆಯ ಕೀಗಳನ್ನೇ ಮರೆತುಬಿಡ್ತೇವೆ. ಈ ರೀತಿ ಆಗಬಾರದು ಅಂತಾ ಕೆಲವರು ಎಕ್ಸ್ಟ್ರಾ ಕೀಗಳನ್ನ ಪರ್ಸ್ನಲ್ಲಿ ಇಟ್ಟುಕೊಂಡುಬಿರ್ತಾರೆ. ಆದರೆ ನೆವಾಡಾದ ಯುವತಿಯೊಬ್ಬಳು ಮನೆಯೊಳಗೆ ಇಟ್ಟ ಕೀಗಳನ್ನ ಪಡೆಯಲು ಮಾಡಿದ ಪ್ಲಾನ್ನಿಂದಾಗಿ ಪೇಚಿಗೆ ಸಿಲುಕಿದ್ದಾಳೆ .
ಮನೆಯ ಒಳಗೆ ಕೀಯನ್ನ ಬಿಟ್ಟಿದ್ದ ಯುವತಿ ಹೊರಗಡೆಯಿಂದ ಮನೆ ಬಾಗಿಲನ್ನ ಲಾಕ್ ಮಾಡಿ ತೆರಳಿದ್ದಳು. ವಾಪಸ್ ಮನೆಗೆ ಬಂದಾಗ ತನ್ನ ಬಳಿ ಕೀ ಇಲ್ಲ ಎಂಬ ವಿಚಾರ ಆಕೆಗೆ ಮನವರಿಕೆ ಆಗಿದೆ. ಬೀಗದ ಕೈ ಮುರಿಯಲು ಬೇರೆ ವ್ಯಕ್ತಿಯನ್ನ ಕರೆಯುವ ಬದಲು ಈಕೆ ಮನೆಯ ಚಿಮಣಿಯ ಮೂಲಕ ಮನೆ ಒಳಗೆ ಹೊಕ್ಕಲು ಪ್ಲಾನ್ ಮಾಡಿದ್ದಾರೆ.
ಚಿಮಣಿಯಿಂದ ಹೊಕ್ಕುವ ಈಕೆಯ ಐಡಿಯಾ ಫಲಿಸಲಿಲ್ಲ. ಬದಲಾಗಿ ಈಕೆ ಚಿಮಣಿಯ ಮಧ್ಯದಲ್ಲೇ ಸಿಲುಕಿಕೊಂಡಿದ್ದಾಳೆ. ಕೊನೆಗೆ ಈಕೆಯನ್ನ ಪಾರು ಮಾಡಲು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ಘಟನೆಯನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು ನೆಟ್ಟಿಗರು ಶಾಕ್ ಆಗಿದ್ದಾರೆ .