ಸಂಭ್ರಮದಿಂದ ಜನ್ಮ ದಿನಾಚರಣೆಯನ್ನು ಆಚರಿಸಿದ 91ರ ವೃದ್ಧೆ – ಫಿದಾ ಆದ ನೆಟ್ಟಿಗರು….! 21-10-2021 9:55PM IST / No Comments / Posted In: Latest News, Live News, International ವಯಸ್ಸಾಗುತ್ತಾ ಹೋದಂತೆ ಚಿಂತೆಗಳು ಶುರುವಾಗುತ್ತೆ. ಖಾಯಿಲೆಗಳು ಒಂದೊಂದಾಗಿ ಆವರಿಸಿಕೊಳ್ಳುತ್ತೆ. ಹೀಗಾಗಿ ಅನೇಕರು ವೃದ್ಧಾಪ್ಯ ಅಂದರೆ ಭಯಪಡ್ತಾರೆ. ಆದರೆ ಇಂತವರ ಮನಸ್ಥಿತಿಯನ್ನೇ ಬದಲಿಸುವಂತ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಟ್ವಿಟರ್ನಲ್ಲಿ ಭಾರೀ ಸದ್ದು ಮಾಡುತ್ತಿರುವ ವಿಡಿಯೋ ಇದಾಗಿದ್ದು ಇದರಲ್ಲಿ 91 ವರ್ಷದ ವೃದ್ಧೆ ತನ್ನ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ನಮ್ಮ ಅಜ್ಜಿಯ 91ನೇ ವರ್ಷದ ಜನ್ಮಾಚರಣೆಯನ್ನು ಆಚರಿಸುತ್ತಿರುವ ನಾವೇ ಧನ್ಯರು. 91 ವರ್ಷ ವಯಸ್ಸಾಗಿದ್ದರೂ ಸಹ ಈಕೆಯ ಇಷ್ಟದ ಹಾಡನ್ನು ಕೇಳಿಸಿದ್ರೆ ಈಗಲೂ ನೃತ್ಯ ಮಾಡುತ್ತಾರೆ. ಎಂದು ಈ ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಫಟಾಫಟ್ ಹಣಬೇಕೆಂದ್ರೆ ಈಗ್ಲೇ ಕಪಾಟು ಚೆಕ್ ಮಾಡಿ ವಿಡಿಯೋದಲ್ಲಿ ವೃದ್ಧೆ ಕೋಣೆಯ ಮಧ್ಯದಲ್ಲಿ ನೃತ್ಯ ಮಾಡುತ್ತಿರೋದನ್ನು ಕಾಣಬಹುದಾಗಿದೆ. ಈಕೆಯ ನೃತ್ಯವನ್ನು ಅನೇಕರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಿದ್ದಾರೆ. ಈ ವಿಡಿಯೋ 22 ಸಾವಿರಕ್ಕೂ ಅಧಿಕ ವೀವ್ಸ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ. "We were blessed to celebrate my Grandmothers 91st birthday…91 years old and still jumping up to dance when her song comes on! Love you so much Grandma!"🎊🎉🥳🎈(🎥:isaiahfreemanmusic)🎵 pic.twitter.com/7X0SLUMBYT — GoodNewsCorrespondent (@GoodNewsCorres1) October 20, 2021