ಕೊರೊನಾ ವೈರಸ್ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ರೋಗಿಗಳ ಭೇಟಿಗೆ ಸಾಕಷ್ಟು ನಿರ್ಬಂಧಗಳನ್ನ ವಿಧಿಸಲಾಗಿದೆ. ಇದೇ ಕಾರಣಕ್ಕೆ ಲಿಸಾ ಎಂಬ ಮಹಿಳೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತನ್ನ ತಂದೆಯನ್ನ ನೋಡೋಕೆ ಸಾಧ್ಯವಾಗಿರಲಿಲ್ಲ. ತನ್ನ ತಂದೆಯ ಆರೈಕೆ ಮಾಡಬೇಕು ಎಂಬ ಕಾರಣಕ್ಕೆ ಲಿಸಾ ಅದೇ ಆಸ್ಪತ್ರೆಯಲ್ಲಿ ಪಾರ್ಟ್ ಟೈಂ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದಾರೆ.
58 ವರ್ಷದ ಲಿಸಾ ವೃತ್ತಿಯಲ್ಲಿ ಪ್ರಾಜೆಕ್ಟ್ ಮ್ಯಾನೆಜರ್ ಆಗಿದ್ದಾರೆ. ಆದರೆ, ತಂದೆಗಾಗಿ ತನ್ನ ಕೆಲಸದ ಅವಧಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡ ಲಿಸಾ ಡಿಸೆಂಬರ್ 1 ರಂದು ಪಾರ್ಟ್ ಟೈಂ ನರ್ಸ್ ಆಗಿ ಕೆಲಸಕ್ಕೆ ಸೇರಿದ್ದಾರೆ.
ಈಕೆ ವಾರದಲ್ಲಿ 2 ಇಲ್ಲವೇ 3 ದಿನಗಳ ಕಾಲ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾಳೆ. ಪಾತ್ರೆ ತೊಳೆಯೋದು, ನೆಲ ಒರೆಸೋದು, ಊಟ ಬಡಿಸೋದು ಸೇರಿದಂತೆ ವಿವಿಧ ಕೆಲಸಗಳನ್ನ ಮಾಡ್ತಾರೆ. ಅಂದ ಹಾಗೆ, ಈ ಕೆಲಸಗಳನ್ನ ಮಾಡೋದು ಲೀಸಾಗೆ ಸುಲಭವಂತೂ ಆಗಿರಲಿಲ್ಲ. ಆದರೆ, ಇದರಿಂದ ತನ್ನ 87 ವರ್ಷದ ತಂದೆಯನ್ನ ನೋಡಲು ಸಾಧ್ಯವಾಗುತ್ತೆ ಎಂಬ ಒಂದೇ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ.
ನಾನೊಂದು ಹೊಸ ಅಭ್ಯಾಸವನ್ನ ರೂಢಿಸಿಕೊಂಡಿದ್ದೇನೆ. ಕೆಲಸದ ಅವಧಿಗಿಂತ ಕೆಲ ನಿಮಿಷ ಮೊದಲೇ ಆಸ್ಪತ್ರೆಗೆ ಹಾಜರಾಗುತ್ತೇನೆ. ಈ ಅವಧಿಯಲ್ಲಿ ನನ್ನ ತಂದೆಯನ್ನ ನೋಡುತ್ತೇನೆ. ಇದಾದ ಬಳಿಕ ಕೆಲಸವನ್ನೆಲ್ಲಾ ಮುಗಿಸಿ ಮತ್ತೊಮ್ಮೆ ನನ್ನ ತಂದೆಯನ್ನ ಭೇಟಿಯಾಗ್ತೇನೆ ಎಂದು ಲಿಸಾ ಹೇಳಿದ್ದಾರೆ.