42 ಕೋಟಿ ಮೌಲ್ಯದ ವಜ್ರಗಳನ್ನು ಕದ್ದ ಲುಲು ಲಕಾಟೋಸ್ ಎಂಬ ವಜ್ರದ ಕಳ್ಳಿಗೆ ಯುನೈಟೆಡ್ ಕಿಂಗ್‌ಡಮ್‌ನ ನ್ಯಾಯಾಲಯ ಕೇವಲ 25 ಸಾವಿರ ರೂಪಾಯಿ ದಂಡ ವಿಧಿಸಿದೆ. 2016ರಲ್ಲಿ ಸಿನಿಮೀಯ ರೀತಿಯಲ್ಲಿ ಈ ವಜ್ರಗಳ್ಳತನ ನಡೆದಿತ್ತು. ಐಷಾರಾಮಿ ಜ್ಯುವೆಲರ್ ಮಾಲೀಕರಿಗೆ ತನ್ನನ್ನು ತಾನು ಡೈಮಂಡ್ ಎಕ್ಸ್ಪರ್ಟ್ ಎಂದು ಪರಿಚಯಿಸಿಕೊಂಡ ಲುಲು, ವಜ್ರಗಳನ್ನು, ಪೆಬಲ್ಸ್(ಬೆಣಚು ಕಲ್ಲು)ನೊಂದಿಗೆ ಬದಲಾಯಿಸಿ ಮಹಾ ದರೋಡೆ ಮಾಡಿದ್ದಳು.
ವರದಿಗಳ ಪ್ರಕಾರ, ಅವರು 2016 ರಲ್ಲಿ ಬೂಡಲ್ಸ್‌ನ ಐಷಾರಾಮಿ ಮೇಫೇರ್ ಜ್ಯುವೆಲರ್‌ಗಳ ಸಿಬ್ಬಂದಿಗೆ ರಷ್ಯಾದ ಶ್ರೀಮಂತ ಗ್ರಾಹಕರ ಪರವಾಗಿ ದುಬಾರಿ ವಜ್ರಗಳನ್ನು ಮೌಲ್ಯೀಕರಿಸುವುದಾಗಿ ಹೇಳಿ ಕಳ್ಳತನ ಮಾಡಿದ್ದಾಳೆ. ಲುಲು ಪರೀಕ್ಷಿಸಿದ ವಜ್ರಗಳನ್ನು ಬೀಗ ಹಾಕಿದ ಪರ್ಸ್‌ನಲ್ಲಿ, ನ್ಯೂ ಬಾಂಡ್ ಸ್ಟ್ರೀಟ್ ಸ್ಟೋರ್‌ನ ವಾಲ್ಟ್‌ನಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿನ ಸಿಬ್ಬಂದಿಗೆ ಅನುಮಾನ ಬಂದು ಪರ್ಸ್ ತೆಗೆದು ನೋಡಿದಾಗ ಕಲ್ಲುಗಳು ಕಾಣಿಸಿದ್ದವು.
ಎದೆ ಝಲ್ಲೆನ್ನುತ್ತೆ ಮನೆಯ ಕಿಟಕಿ ಸ್ವಚ್ಛಗೊಳಿಸಲು ಈ ಮಹಿಳೆ ತೆಗೆದುಕೊಂಡ ರಿಸ್ಕ್
ಕಳ್ಳತನವಾದ ಕೆಲವೇ ಗಂಟೆಗಳ ನಂತರ, ಲುಲು ಮತ್ತು ಅವಳ ಸಹಚರರು ದೇಶದಿಂದ ಪಲಾಯನ ಮಾಡಿ ಫ್ರಾನ್ಸ್‌ಗೆ ತೆರಳಿದ್ದರು. ಆದರೆ ಆಕೆ ಅಸಲಿ ವಜ್ರಗಳನ್ನು, ನಕಲಿಗೆ ಬದಲಾಯಿಸುವ ಮೊದಲು, ಡೈಮಂಡ್ ಗಳಿದ್ದ ಪರ್ಸ್ ಅನ್ನು ತನ್ನ ಕೈಚೀಲಕ್ಕೆ ಬೀಳಿಸುವುದು ಜ್ಯವೆಲರ್ ಸಂಸ್ಥೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇನ್ನು ಆಕೆಗೆ ಜ್ಯುವೆಲರ್ ಸಂಸ್ಥೆಯ ನೌಕರರು ಸಹಾಯ ನೀಡಿರುವುದು ಬೆಳಕಿಗೆ ಬಂದಿದೆ. ಅವರನ್ನೂ ಬಂಧಿಸಲಾಗಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ, ಯುರೋಪಿಯನ್ ಅರೆಸ್ಟ್ ವಾರಂಟ್‌ನಲ್ಲಿ ಲಕಾಟೋಸ್‌ನನ್ನು ಫ್ರಾನ್ಸ್‌ನಲ್ಲಿ ಬಂಧಿಸಲಾಯಿತು. ಆನಂತರ ಯುನೈಟೆಡ್ ಕಿಂಗ್‌ಡಮ್‌ಗೆ ಹಸ್ತಾಂತರಿಸಲಾಯಿತು. ಈಗ ಪ್ರಕರಣದ ಅಂತಿಮ ತೀರ್ಪು ಬಂದಿದ್ದು, 60 ವರ್ಷದ ಲುಲುಗೆ ಕಡಿಮೆ ಮೊತ್ತದ ದಂಡ ಹಾಗೂ ಐದೂವರೆ ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.