ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದ ಪ್ರತಿಷ್ಠಿತ ಪ್ರದೇಶವೊಂದರಲ್ಲಿರುವ ಮುಖ್ಯಮಂತ್ರಿಗಳ ನಿವಾಸದ ಬಳಿ ಚಿರತೆಯೊಂದು ಕಾಣಿಸಿಕೊಂಡಿದೆ. ಮುಖ್ಯಮಂತ್ರಿಗಳ ಗೃಹದ ಬಳಿ ಚಿರತೆಯನ್ನು ಕಂಡ ಅನಿತಾ ಹೆಸರಿನ ಮಹಿಳೆಯೊಬ್ಬರು ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಘಟನೆ ಬಳಿಕ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಹಾಗೂ ನಗರಾಡಳಿತಗಳು ದೊಡ್ಡ ಬೆಕ್ಕನ್ನು ಹಿಡಿಯಲು ಜಾಲ ಹೆಣೆದಿವೆ.
ಮುಖ್ಯಮಂತ್ರಿಗಳ ನಿವಾಸವಿರುವ ಭಾರೀ ಭದ್ರತೆ ಇರುವ ಇಂಥ ಪ್ರದೇಶದಲ್ಲೇ ಚಿರತೆ ಕಂಡಿರುವುದು ಸ್ಥಳೀಯರಲ್ಲಿ ಗಾಬರಿ ಮೂಡಿಸಿದೆ.
ಹುಡುಗಿಯರು 16 ನೇ ವಯಸ್ಸಿಗೆ ಮದುವೆಯಾದರೆ ತಪ್ಪೇನು…? ಸಮಾಜವಾದಿ ಸಂಸದನ ಪ್ರಶ್ನೆ
ನಗರದ ಸಂಜೌಲಿ, ಕನ್ಲಾಂಗ್, ನವ್ಬಾಹರ್ ಮತ್ತು ಮಲ್ಯಾನಾ ಪ್ರದೇಶಗಳಲ್ಲಿ ಚಿರತೆ ಈ ಹಿಂದೆ ಕಾಣಿಸಿಕೊಂಡಿದೆ. ಇತ್ತೀಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹೆಣ್ಣು ಚಿರತೆಯೊಂದನ್ನು ಸೆರೆ ಹಿಡಿಯಲು ಸಫಲರಾಗಿದ್ದರು. ನಗರದಲ್ಲಿ ಸುಮಾರು 8 ಚಿರತೆಗಳು ಓಡಾಡುತ್ತಿರುವ ಕಾರಣ ನಗರವಾಸಿಗಳಲ್ಲಿ ಭಯ ಆವರಿಸಿದೆ. ಕೆಲವೊಂದು ಚಿರತೆಗಳು ಅರಣ್ಯ ಇಲಾಖೆಯ ಕ್ಯಾಮೆರಾಗಳ ಕಣ್ಣಿಗೆ ಬಿದ್ದಿವೆ.
ನಗರದಲ್ಲಿ ಇಬ್ಬರು ಮಕ್ಕಳನ್ನು ಚಿರತೆಗಳು ಕೊಂದಿವೆ. ದೀಪಾವಳಿಯ ರಾತ್ರಿಯೊಂದರ ವೇಳೆ, ನಗರದ ಡೌನ್‌ಡೇಲ್ ಪ್ರದೇಶದಲ್ಲಿ ಆರು ವರ್ಷದ ಮಗುವೊಂದನ್ನು ಚಿರತೆ ಕೊಂದಿತ್ತು.