alex Certify ʼಬಾರ್ಬಿʼಯಂತಾಗಲು ಬರೋಬ್ಬರಿ 53 ಲಕ್ಷ ರೂ. ವೆಚ್ಚ ಮಾಡಿದ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬಾರ್ಬಿʼಯಂತಾಗಲು ಬರೋಬ್ಬರಿ 53 ಲಕ್ಷ ರೂ. ವೆಚ್ಚ ಮಾಡಿದ ಯುವತಿ

ಪ್ರತಿಯೊಬ್ಬರಿಗೂ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಆಸೆ ಇರುತ್ತದೆ. ಆದರೆ, ಆ ಆಸೆಗೊಂದು ಮಿತಿಯೂ ಇರುತ್ತದೆ. ಆಸ್ಟ್ರಿಯಾದ ಮಾಡೆಲ್ ಒಬ್ಬರು ತಾನು ಬಾರ್ಬಿ ಗೊಂಬೆಯಂತೆ ಕಾಣುವಂತಾಗಬೇಕೆಂದು ಅದಕ್ಕಾಗಿ ಬೇಕಾದ ಸರ್ಜರಿ ಮಾಡಿಸಿಕೊಳ್ಳಲು ಬರೋಬ್ಬರಿ 53 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.

21 ವರ್ಷದ ಮಾಡೆಲ್ ಜೆಸ್ಸಿ ಬನ್ನಿ, ಸರ್ಜರಿ ಮಾಡಿಸಿಕೊಂಡ ಹುಚ್ಚಾಟವನ್ನು ಕಂಡ ಕುಟುಂಬದವರು ಆಕೆಯನ್ನೇ ತೊರೆದಿದ್ದಾರೆ. ಈ ವಿಚಾರವನ್ನು ಸ್ವತಃ ಜೆಸ್ಸಿ ಹೇಳಿಕೊಂಡಿದ್ದಾಳೆ.

ತನ್ನ ರೂಪವನ್ನು ಬದಲಿಸಿಕೊಂಡು ಬಾರ್ಬಿ ಗೊಂಬೆಯನ್ನು ಕಾಣಲು ಆಕೆ ಇದುವರೆಗೆ ಹಲವಾರು ಸರ್ಜರಿಗಳಿಗೆ 52.8 ಲಕ್ಷ ರೂಪಾಯಿ ವ್ಯಯಿಸಿದ್ದಾಳೆ.

ಹೋಟೆಲ್ ಬಾಲ್ಕನಿಯಿಂದ ಜಿರಾಫೆಗೆ ಆಹಾರವುಣಿಸಿದ ಮಹಿಳೆ: ವಿಡಿಯೋ ವೈರಲ್

ಬಾರ್ಬಿಯಂತೆ ಕಾಣಲು ಆಕೆ ತನ್ನ ಸ್ತನ, ಪೃಷ್ಠ ಮತ್ತು ತುಟಿಗಳು ದಪ್ಪ ಕಾಣುವಂತೆ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಆಸ್ಟ್ರಿಯಾದ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಜೆಸ್ಸಿ, ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದಕ್ಕೆ ನಮ್ಮ ಕುಟುಂಬದ ವಿರೋಧವಿತ್ತು. ಈಗ ಅವರ್ಯಾರೂ ನನ್ನೊಂದಿಗೆ ಮಾತನಾಡುತ್ತಿಲ್ಲ, ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ಹೇಳಿಕೊಂಡಿದ್ದಾಳೆ.

2018 ರಿಂದ ರೂಪ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದು, ಸ್ತನಗಳು ದಪ್ಪಗೆ ಕಾಣುವಂತೆ ಸರ್ಜರಿ ಮಾಡಿಸಿಕೊಂಡಿರುವ ಈಕೆ, ಪೃಷ್ಠ ಮತ್ತು ತುಟಿಗಳೂ ದಪ್ಪ ಕಾಣುವ ರೀತಿಯಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳಂತೆ. ಈ ರೂಪಾಂತರಗೊಂಡ ಚಿತ್ರಗಳನ್ನು ಈಕೆ ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...