alex Certify ಬೆರಗಾಗಿಸುತ್ತೆ 30 ವರ್ಷಗಳ ಹಿಂದಿನ ಚಿತ್ರಕ್ಕಿರುವ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ 30 ವರ್ಷಗಳ ಹಿಂದಿನ ಚಿತ್ರಕ್ಕಿರುವ ಬೆಲೆ…!

ವಿದೇಶಗಳಲ್ಲಿ ನಡೆಯುವ ಪುರಾತನ ವಸ್ತುಗಳ ರೋಡ್​ ಶೋ ಅನೇಕರ ಪಾಲಿಗೆ ಭಾಗ್ಯವನ್ನೇ ಬದಲಿಸುವ ಕಾರ್ಯಕ್ರಮವಾಗಿದೆ. ಮನೆಯಲ್ಲಿದ್ದ ಹಳೆಯ ವಸ್ತುಗಳು ಮಿಲಿಯನ್​ ಡಾಲರ್​ ಮೌಲ್ಯವನ್ನ ಹೊಂದಿದೆ ಎಂಬ ವಿಚಾರ ಗೊತ್ತಾದ್ರೆ ಯಾರಿಗ್ ತಾನೆ ಖುಷಿಯಾಗೋದಿಲ್ಲ ಹೇಳಿ..?

ಕೆಲ ದಿನಗಳ ಹಿಂದಷ್ಟೇ ಇದೇ ರೀತಿಯ ಕಾರ್ಯಕ್ರಮದಲ್ಲಿ ಮಹಿಳೆಯ ಬಳಿ ಇದ್ದ ಬಾರ್ಬಿ ಡಾಲರ್​​ ಒಂದು 1.54 ಲಕ್ಷ ರೂಪಾಯಿ ಮೌಲ್ಯ ಹೊಂದಿದೆ ಎಂದು ತಿಳಿದು ಆಕೆ ಶಾಕ್​ ಆಗಿದ್ದಳು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲೆಲ್ಲ ವೈರಲ್​ ಆಗಿತ್ತು.

ಇದೇ ರೀತಿಯ ಇನ್ನೊಂದು ಘಟನೆ ಇದೀಗ ವೈರಲ್​ ಆಗಿದೆ. ಆಂಟಿಕ್​ ರೋಡ್​ ಶೋನಲ್ಲಿ ಭಾಗಿಯಾಗಿದ್ದ ಮಹಿಳೆಗೆ ತನ್ನ ಬಳಿ ಇರುವ ಚಿತ್ರವೊಂದು ನಾಲ್ಕಂಕಿ ಮೌಲ್ಯ ಹೊಂದಿದೆ ಎಂದು ತಿಳಿದು ಶಾಕ್​ ಆಗಿದ್ದಾಳೆ. ಕಚೇರಿಯನ್ನ ಸ್ವಚ್ಛ ಮಾಡುತ್ತಿದ್ದ ವೇಳೆ ತಾನು ಈ ಚಿತ್ರವನ್ನ ಕಂಡುಕೊಂಡೆ ಎಂದು ಈಕೆ ಕಾರ್ಯಕ್ರಮದ ನಿರೂಪಕರಿಗೆ ಹೇಳಿದ್ದಾಳೆ.

ಅಂದಹಾಗೆ ಈ ಚಿತ್ರಕ್ಕೆ ಇಷ್ಟೊಂದು ಬೆಲೆ ಬರೋಕೆ ಕಾರಣ ಕೂಡ ಇದೆ. ಈ ಚಿತ್ರವನ್ನ ಪ್ರಸಿದ್ಧ ವ್ಯಂಗ್ರಚಿತ್ರಕಾರ ಕ್ವೆಂಟಿನ್​ ಬ್ಲೇಕ್​ ಎಂಬವರು ಬಿಡಿಸಿದ್ದಾರೆ. ಈಕೆ ಪುಸ್ತಕಗಳ ರಾಶಿಯಲ್ಲಿ ಈ ಚಿತ್ರಕಲೆಯನ್ನ ನೋಡಿದ್ದಾಗಿ ಹೇಳಿದ್ದಾಳೆ. ಇದು ಸರಿಸುಮಾರು 30 ವರ್ಷದ ಹಿಂದಿನ ಚಿತ್ರಕಲೆಯಾಗಿದ್ದು ಇದರ ಪ್ರಸ್ತುತ ಬೆಲೆ 1.54 ಲಕ್ಷ ರೂಪಾಯಿ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...