alex Certify ಮನೆಗೆ ಬಂದ 100 ಕ್ಕೂ ಅಧಿಕ ಪ್ರವಾಸಿಗರು; ಇದರ ಹಿಂದಿನ ಕಾರಣ ತಿಳಿದು ಮಹಿಳೆ ಕಂಗಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ಬಂದ 100 ಕ್ಕೂ ಅಧಿಕ ಪ್ರವಾಸಿಗರು; ಇದರ ಹಿಂದಿನ ಕಾರಣ ತಿಳಿದು ಮಹಿಳೆ ಕಂಗಾಲು

ಆನ್​ ವ್ಯವಹಾರ ಹೆಚ್ಚುತ್ತಿದ್ದಂತೆ ಹೊಸ ಹೊಸ ರೀತಿಯ ವಂಚನೆ ಪ್ರಕರಣ ಹೆಚ್ಚಾಗುತ್ತಿದೆ. ಇದೀಗ ಆನ್​ಲೈನ್​ ಬುಕ್ಕಿಂಗ್​ ಹಗರಣವೊಂದಲ್ಲಿ ಒಬ್ಬಾಕೆ ಮನೆ ಮುಂದೆ ತಿಂಗಳಲ್ಲಿ 100ಕ್ಕೂ ಅಧಿಕ ಮಂದಿ ಪ್ರವಾಸಿಗರು ಬಂದು ನಿಂತು ವಾಸ್ತವ್ಯ ಬಯಸಿರುವ ಪ್ರಸಂಗ ನಡೆದಿದೆ.

ಏಕಾಏಕಿ ಮನೆ ಮುಂದೆ ಜನ ಬಂದು ವಾಸ್ತವ್ಯಕ್ಕೆ ಅವಕಾಶ ಕೋರುವುದನ್ನು ಕಂಡು ಆ ಮಹಿಳೆ ಅವಾಕ್ಕಾಗಿ ಹೋಗಿದ್ದಾರೆ. ಈ ಘಟನೆ ನಡೆದಿರುವು ಉತ್ತರ ಲಂಡನ್​ನಲ್ಲಿ. ಅಲ್ಲಿನ ನಿವಾಸಿ ಗಿಲಿಯನ್​ ಈ ಸಮಸ್ಯೆ ಎದುರಿಸಿದ್ದಾರೆ.

ಒಂದೇ ದಿನ ಕೆಲವು ಗಂಟೆಗಳ ಅಂತರದಲ್ಲಿ ಮೂರು ಅಥವಾ ನಾಲ್ಕು ಜನರು ಮನೆ ವಾಸ್ತವ್ಯಕ್ಕಾಗಿ ಬಂದುಬಿಟ್ಟಿದ್ದರು. ತಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳಿದರೆ, ಬುಕ್ಕಿಂಗ್​ ಡಾಟ್​ ಕಾಮ್​ ನಿಂದ ಮನೆ ಬುಕ್​ ಮಾಡಿರುವುದಾಗಿ ಪ್ರವಾಸಿಗರು ಹೇಳಿಕೊಂಡಿದ್ದಾರೆ.

ಬಂದವರು ಪ್ರಪಂಚದ ವಿವಿಧ ದೇಶದವರು ಎಂಬುದು ಗಮನಾರ್ಹ ಸಂಗತಿ. ಆಸ್ಟ್ರೇಲಿಯನ್ನರು, ಸೌದಿ ಅರೇಬಿಯಾ, ಇಂಗ್ಲೆಂಡ್​ನಿಂದ ಬಂದವರೂ ಇದ್ದರು. ಈ ರೀತಿ ಜುಲೈ ಪೂರ್ತಿ ಮುಂದುವರೆಯಿತು.

ವೆಬ್​ಸೈಟ್​ನಲ್ಲಿ ಬುಕ್​ ಮಾಡಲು ಅವರೆಲ್ಲ ಹಣ ಪಾವತಿಸಿ ಬಂದವರಾಗಿದ್ದರು. ಬಳಿಕ ಗಿಲಿಯನ್​ ಸ್ವತಃ ವಿಷಯದ ತಿರುಳನ್ನು ಕಂಡುಕೊಳ್ಳಲು ನಿರ್ಧರಿಸಿ, ವೆಬ್​ಸೈಟ್​ ಗಮನಿಸಿದಾಗ ಆಕೆ ಮನೆ ವಿಳಾಸದೊಂದಿಗೆ ಜಾಹೀರಾತು ಕಾಣಿಸಿತು. ಆದರೆ, ಮನೆಯ ಚಿತ್ರಗಳು ನಕಲಿಯಾಗಿದ್ದವು ಎಂಬುದು ಅರಿವಿಗೆ ಬಂತು.

ಹಗರಣ ಬೆಳಕಿಗೆ ಬರುತ್ತಿದ್ದಂತೆ, ಬುಕ್ಕಿಂಗ್​ ಡಾಟ್​ಕಾಮ್​ ಈ ಮಾಹಿತಿ ತೆಗೆದು ಹಾಕಿತಲ್ಲದೇ, ಎಲ್ಲರನ್ನೂ ಸಂಪರ್ಕಿಸಿ ಎಲ್ಲರನ್ನೂ ಮಾತನಾಡಿಸಿ ವಂಚನೆ ಬಗ್ಗೆ ತಿಳಿಸಿ, ವಿಷಾದಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...