alex Certify ವೃದ್ಧ ದಂಪತಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ಹಾರ್ಟ್​ ಎಮೋಜಿಯಿಂದ ತುಂಬಿದ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೃದ್ಧ ದಂಪತಿಯ ನೃತ್ಯಕ್ಕೆ ನೆಟ್ಟಿಗರು ಫಿದಾ: ಹಾರ್ಟ್​ ಎಮೋಜಿಯಿಂದ ತುಂಬಿದ ವಿಡಿಯೋ

ಬೇರೆ ಸಂಸ್ಕೃತಿಯ ಯಾರಾದರೂ ನಿಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದಾಗ ಅದನ್ನು ನೋಡುವುದು ಎಂದರೆ ಖುಷಿಯಲ್ಲವೆ? ಈ ಮಹಿಳೆಯ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ.

ವಾಸ್ತವವಾಗಿ, ಶಿವಾಂಗಿ ಎಂಬ ಮಹಿಳೆ ತನ್ನ ಕೊರಿಯನ್ ಮಾವ ʼಕಿಸಿ ಡಿಸ್ಕೋ ಮೇ ಜಾಯೆಗೆʼಯನ್ನು ಅತ್ತೆಯ ಜೊತೆ ನೃತ್ಯ ಮಾಡುವ ವಿಡಿಯೋ ಶೇರ್​ ಮಾಡಿದ್ದಾರೆ.

ಈಗ ವೈರಲ್ ಆಗಿರುವ ವೀಡಿಯೊವನ್ನು ಕರಿ ಎನ್ ಕಿಮ್ಚಿ ಅವರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಶಿವಾಂಗಿಯ ಕೊರಿಯನ್ ಮಾವ ತನ್ನ ಪತ್ನಿಯೊಂದಿಗೆ ಗೋವಿಂದನ ಹಾಡಿಗೆ ನೃತ್ಯ ಮಾಡುವುದನ್ನು ನೋಡಬಹುದು.

ಅವರು ಸುಂದರವಾದ ಕುರ್ತಾ ಸಹ ಧರಿಸಿದ್ದರು ಮತ್ತು ಅವರ ದೇಸಿ ಕುಟುಂಬದೊಂದಿಗೆ ಸಾಕಷ್ಟು ಮೋಜು ಮಾಡಿದ್ದಾರೆ. ಈ ವಿಡಿಯೋಗೆ ಹೃದಯಗಳ ಎಮೋಜಿಯಿಂದ ಜನರು ಅಭಿನಂದಿಸುತ್ತಿದ್ದಾರೆ. ನೆಟ್ಟಿಗರು ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ ಕಂಡು ಮೆಚ್ಚಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...