ಬೇರೆ ಸಂಸ್ಕೃತಿಯ ಯಾರಾದರೂ ನಿಮ್ಮ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಿದಾಗ ಅದನ್ನು ನೋಡುವುದು ಎಂದರೆ ಖುಷಿಯಲ್ಲವೆ? ಈ ಮಹಿಳೆಯ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ.
ವಾಸ್ತವವಾಗಿ, ಶಿವಾಂಗಿ ಎಂಬ ಮಹಿಳೆ ತನ್ನ ಕೊರಿಯನ್ ಮಾವ ʼಕಿಸಿ ಡಿಸ್ಕೋ ಮೇ ಜಾಯೆಗೆʼಯನ್ನು ಅತ್ತೆಯ ಜೊತೆ ನೃತ್ಯ ಮಾಡುವ ವಿಡಿಯೋ ಶೇರ್ ಮಾಡಿದ್ದಾರೆ.
ಈಗ ವೈರಲ್ ಆಗಿರುವ ವೀಡಿಯೊವನ್ನು ಕರಿ ಎನ್ ಕಿಮ್ಚಿ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಶಿವಾಂಗಿಯ ಕೊರಿಯನ್ ಮಾವ ತನ್ನ ಪತ್ನಿಯೊಂದಿಗೆ ಗೋವಿಂದನ ಹಾಡಿಗೆ ನೃತ್ಯ ಮಾಡುವುದನ್ನು ನೋಡಬಹುದು.
ಅವರು ಸುಂದರವಾದ ಕುರ್ತಾ ಸಹ ಧರಿಸಿದ್ದರು ಮತ್ತು ಅವರ ದೇಸಿ ಕುಟುಂಬದೊಂದಿಗೆ ಸಾಕಷ್ಟು ಮೋಜು ಮಾಡಿದ್ದಾರೆ. ಈ ವಿಡಿಯೋಗೆ ಹೃದಯಗಳ ಎಮೋಜಿಯಿಂದ ಜನರು ಅಭಿನಂದಿಸುತ್ತಿದ್ದಾರೆ. ನೆಟ್ಟಿಗರು ಈ ವಯಸ್ಸಿನಲ್ಲಿಯೂ ಅವರ ಉತ್ಸಾಹ ಕಂಡು ಮೆಚ್ಚಿದ್ದಾರೆ.
https://www.youtube.com/watch?v=8dBRVkwwkd0&feature=youtu.be