ನ್ಯೂಯಾರ್ಕ್ನ ಮಹಿಳೆಯೊಬ್ಬಳು ತಾನು ಆರ್ಡರ್ ಮಾಡದೆಯೇ ಅಮೆಜಾನ್ನಿಂದ ಬರೋಬ್ಬರಿ 150 ಪಾರ್ಸೆಲ್ಗಳನ್ನ ಸ್ವೀಕರಿಸಿದ್ದಾಳೆ. ಈ 150 ಬಾಕ್ಸ್ಗಳ ತುಂಬೆಲ್ಲ ಮಾಸ್ಕ್ ಬ್ರಾಕೆಟ್ ತುಂಬಿದ್ದವು. ಇವೆಲ್ಲವನ್ನೂ ಈಕೆ ಹತ್ತಿರದ ಆಸ್ಪತ್ರೆಗೆ ದೇಣಿಗೆ ರೂಪದಲ್ಲಿ ನೀಡಿದ್ದಾಳೆ.
ಜಿಲಿಯನ್ ಕೆನಾನ್ ಎಂಬವರು ಜೂನ್ 5ನೇ ತಾರೀಖಿನಂದು ಈ ಪಾರ್ಸೆಲ್ಗಳನ್ನ ಸ್ವೀಕರಿಸಿದ್ದರು. ಜಿಲಿಯನ್ ಮೊದಲು ಇದು ತಮ್ಮ ಉದ್ಯಮದ ಮಿತ್ರರು ಕಳಿಸಿರಬಹುದು ಎಂದೇ ಭಾವಿಸಿದ್ದರು. ಈ ಬಾಕ್ಸ್ಗಳನ್ನ ತೆರೆದು ನೋಡಿದ ಬಳಿಕ ಮಾಸ್ಕ್ ಬ್ರಾಕೆಟ್ಗಳಿರೋದು ತಿಳಿದು ಬಂದಿದೆ.
ಆದರೆ ಈಕೆ ಅಮೆಜಾನ್ನಿಂದ ಯಾವುದೇ ಡೆಲಿವರಿ ಆರ್ಡರ್ ಮಾಡಿರಲಿಲ್ಲ. ಈ ಬಾಕ್ಸ್ಗಳನ್ನ ಪರಿಶೀಲನೆ ಮಾಡಿದ ವೇಳೆ ವಿಳಾಸ ಒಂದೇ ಆಗಿದ್ದರೂ ಹೆಸರು ಬೇರೆ ಇದೆ ಅನ್ನೋದು ತಿಳಿದು ಬಂದಿದೆ.
ಬಹುಶಃ ವಿಳಾಸ ತಪ್ಪಾಗಿ ಈ ರೀತಿ ಆಗಿರಬಹುದು ಎಂದು ಜಿಲಿಯನ್ ಭಾವಿಸಿದ್ದರು. ಆದರೆ ಬರೋಬ್ಬರಿ 150 ಬಾಕ್ಸ್ಗಳೂ ಇದೇ ರೀತಿ ಆದ ಬಳಿಕ ಗೊಂದಲಕ್ಕೆ ಒಳಗಾದ್ರು. ಅಲ್ಲದೇ ಅಮೆಜಾನ್ಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿದರು. ಅಮೆಜಾನ್ ಈ ತಪ್ಪನ್ನ ಸರಿ ಮಾಡೋದ್ರ ಒಳಗಾಗಿ 150ಕ್ಕೂ ಅಧಿಕ ಬಾಕ್ಸ್ಗಳು ಜಿಲಿಯನ್ ಮನೆ ಸೇರಿದ್ದವು. ಇದರಲ್ಲಿ ಸಾವಿರಾರು ಮಾಸ್ಕ್ ಬ್ರಾಕೆಟ್ಗಳಿದ್ದವು. ಅಮೆಜಾನ್ ಜಿಲಿಯನ್ಗೆ ಈ ಪಾರ್ಸೆಲ್ಗಳನ್ನ ಇಟ್ಟುಕೊಳ್ಳಲು ಹೇಳಿದೆ. ಹೀಗಾಗಿ ಜಿಲಿಯನ್ ಈ ಎಲ್ಲಾ ಮಾಸ್ಕ್ಗಳನ್ನ ಹತ್ತಿರದ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ.