alex Certify ಆರ್ಡರ್​ ಮಾಡದೆಯೇ ಮಹಿಳೆ ಮನೆಗೆ ಬಂತು ಅಮೆಜಾನ್​ನ 150ಕ್ಕೂ ಅಧಿಕ ಪಾರ್ಸೆಲ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್ಡರ್​ ಮಾಡದೆಯೇ ಮಹಿಳೆ ಮನೆಗೆ ಬಂತು ಅಮೆಜಾನ್​ನ 150ಕ್ಕೂ ಅಧಿಕ ಪಾರ್ಸೆಲ್​..!

ನ್ಯೂಯಾರ್ಕ್​ನ ಮಹಿಳೆಯೊಬ್ಬಳು ತಾನು ಆರ್ಡರ್​ ಮಾಡದೆಯೇ ಅಮೆಜಾನ್​​ನಿಂದ ಬರೋಬ್ಬರಿ 150 ಪಾರ್ಸೆಲ್​ಗಳನ್ನ ಸ್ವೀಕರಿಸಿದ್ದಾಳೆ. ಈ 150 ಬಾಕ್ಸ್​ಗಳ ತುಂಬೆಲ್ಲ ಮಾಸ್ಕ್​ ಬ್ರಾಕೆಟ್ ತುಂಬಿದ್ದವು. ಇವೆಲ್ಲವನ್ನೂ ಈಕೆ ಹತ್ತಿರದ ಆಸ್ಪತ್ರೆಗೆ ದೇಣಿಗೆ ರೂಪದಲ್ಲಿ ನೀಡಿದ್ದಾಳೆ.

ಜಿಲಿಯನ್​ ಕೆನಾನ್​ ಎಂಬವರು ಜೂನ್​ 5ನೇ ತಾರೀಖಿನಂದು ಈ ಪಾರ್ಸೆಲ್​ಗಳನ್ನ ಸ್ವೀಕರಿಸಿದ್ದರು. ಜಿಲಿಯನ್​ ಮೊದಲು ಇದು ತಮ್ಮ ಉದ್ಯಮದ ಮಿತ್ರರು ಕಳಿಸಿರಬಹುದು ಎಂದೇ ಭಾವಿಸಿದ್ದರು. ಈ ಬಾಕ್ಸ್​ಗಳನ್ನ ತೆರೆದು ನೋಡಿದ ಬಳಿಕ ಮಾಸ್ಕ್​ ಬ್ರಾಕೆಟ್​​ಗಳಿರೋದು ತಿಳಿದು ಬಂದಿದೆ.

ಆದರೆ ಈಕೆ ಅಮೆಜಾನ್​ನಿಂದ ಯಾವುದೇ ಡೆಲಿವರಿ ಆರ್ಡರ್ ಮಾಡಿರಲಿಲ್ಲ. ಈ ಬಾಕ್ಸ್​ಗಳನ್ನ ಪರಿಶೀಲನೆ ಮಾಡಿದ ವೇಳೆ ವಿಳಾಸ ಒಂದೇ ಆಗಿದ್ದರೂ ಹೆಸರು ಬೇರೆ ಇದೆ ಅನ್ನೋದು ತಿಳಿದು ಬಂದಿದೆ.

ಬಹುಶಃ ವಿಳಾಸ ತಪ್ಪಾಗಿ ಈ ರೀತಿ ಆಗಿರಬಹುದು ಎಂದು ಜಿಲಿಯನ್ ಭಾವಿಸಿದ್ದರು. ಆದರೆ ಬರೋಬ್ಬರಿ 150 ಬಾಕ್ಸ್​ಗಳೂ ಇದೇ ರೀತಿ ಆದ ಬಳಿಕ ಗೊಂದಲಕ್ಕೆ ಒಳಗಾದ್ರು. ಅಲ್ಲದೇ ಅಮೆಜಾನ್​ಗೆ ಈ ಬಗ್ಗೆ ಮಾಹಿತಿಯನ್ನೂ ನೀಡಿದರು. ಅಮೆಜಾನ್​ ಈ ತಪ್ಪನ್ನ ಸರಿ ಮಾಡೋದ್ರ ಒಳಗಾಗಿ 150ಕ್ಕೂ ಅಧಿಕ ಬಾಕ್ಸ್​ಗಳು ಜಿಲಿಯನ್​ ಮನೆ ಸೇರಿದ್ದವು. ಇದರಲ್ಲಿ ಸಾವಿರಾರು ಮಾಸ್ಕ್​ ಬ್ರಾಕೆಟ್​ಗಳಿದ್ದವು. ಅಮೆಜಾನ್​ ಜಿಲಿಯನ್​ಗೆ ಈ ಪಾರ್ಸೆಲ್​ಗಳನ್ನ ಇಟ್ಟುಕೊಳ್ಳಲು ಹೇಳಿದೆ. ಹೀಗಾಗಿ ಜಿಲಿಯನ್​ ಈ ಎಲ್ಲಾ ಮಾಸ್ಕ್​ಗಳನ್ನ ಹತ್ತಿರದ ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...