alex Certify ವಿದ್ಯಾರ್ಥಿಗಳಿಗೆ ಬಿಳಿಬಣ್ಣದ ಸಮವಸ್ತ್ರ ಬೇಕಾ ? ನಡೆದಿದೆ ಹೀಗೊಂದು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳಿಗೆ ಬಿಳಿಬಣ್ಣದ ಸಮವಸ್ತ್ರ ಬೇಕಾ ? ನಡೆದಿದೆ ಹೀಗೊಂದು ಚರ್ಚೆ

ಸಾಮಾನ್ಯವಾಗಿ ಶಾಲೆಗಳಲ್ಲಿ ವಾರದಲ್ಲಿ ಒಂದು ದಿನ ಬಿಳಿ ಬಣ್ಣದ ಸಮವಸ್ತ್ರ ಧರಿಸುವ ನಿಯಮವಿದೆ. ಆದರೆ ಇದೇ ಬಿಳಿ ಬಣ್ಣದ ಸಮವಸ್ತ್ರ ಕುರಿತು ರಿಯಾ ಚೋಪ್ರಾ ತಮ್ಮ ಬ್ಲಾಗ್‌ನಲ್ಲಿ ಪುಶ್ನೆ ಮಾಡಿದ್ದಾರೆ.

‘ನನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರತಿ ಶುಕ್ರವಾರ ಬಿಳಿ ಬಣ್ಣದ ಸಮವಸ್ತ್ರ ಧರಿಸುವ ಕಡ್ಡಾಯ ನಿಯಮವಿತ್ತು. ಈ ನಿಯಮದಿಂದಾಗಿ ಅನೇಕ ವಿದ್ಯಾರ್ಥಿನಿಯರು ನಾನಾ ರೀತಿಯ ಕಷ್ಟಗಳನ್ನು ಎದುರಿಸಬೇಕಾಗಿತ್ತು. ವಿಶೇಷವಾಗಿ ಮುಟ್ಟಿನ ದಿನಗಳಲ್ಲಿ ಅವರು ವಾಶ್ ರೂಮ್‌ಗೆ ಹೋಗಿ ತಮ್ಮ ಸ್ಕರ್ಟ್‌ಗಳನ್ನ ನೋಡಿಕೊಂಡು ಬರಬೇಕಾಗಿತ್ತು. ಎಲ್ಲಿ ಮುಟ್ಟಿನ ಕಲೆಗಳು ಕಾಣಿಸುತ್ತಿದೆಯೋ ಏನೋ ಅಂತ ಭಯ ಅವರಿಗೆ ಕಾಡುತ್ತಿತ್ತು.’ ಎಂದು ಬರೆದಿದ್ದಾರೆ.

ಬಿಳಿ ಬಣ್ಣದ ಸಮವಸ್ತ್ರದಿಂದಾಗಿ ಪ್ರತಿ ವಿದ್ಯಾರ್ಥಿನಿಯರು ಎದುರಿಸಿರೋ ಸಮಸ್ಯೆ ಇದಾಗಿದೆ. ಹಾಗಿದ್ದಲ್ಲಿ ಈ ವೈಟ್ ಕಲರ್ ಯೂನಿಫಾರ್ಮ್ ಬೇಕಾ ? ಬೇಡ್ವಾ ? ಅನ್ನೊದೇ ಈಗ ಇರುವ ಪ್ರಶ್ನೆಯಾಗಿದೆ. ಇದೇ ಬಿಳಿ ಬಣ್ಣದ ಸ್ಕರ್ಟ್‌ನಿಂದಾಗಿ ಬಾಲಕಿಯರು ತುಂಬಾ ಮುಜುಗರವನ್ನ ಎದುರಿಸುತ್ತಾರೆ. ಕೆಲ ಶಾಲೆಗಳು ಈ ನಿಯಮದಿಂದಾಗಿಯೇ ವಿದ್ಯಾರ್ಥಿನಿಯರು ಮುಟ್ಟಿನ ದಿನಗಳಲ್ಲಿ ಹೇಗಿರಬೇಕು ಅನ್ನೊ ಶಿಸ್ತು ಕಲಿಸುತ್ತೆ ಅಂತ ಹೇಳುತ್ತಾರೆ. ವಾಸ್ತವದಲ್ಲಿ ಇದು ತರ್ಕಕ್ಕೆ ನಿಲುಕದ ವಿಚಾರ.

ಸಮವಸ್ತ್ರ ವಿದ್ಯಾರ್ಥಿಗಳಿಗೆ ಆರಾಮದಾಯಕವಾಗಿರಬೇಕು. ಆದರೆ ಈ ಬಿಳಿಬಣ್ಣದ ಸಮವಸ್ತ್ರದಿಂದಾಗಿ, ಎಲ್ಲಿ ಕಲೆಗಳಾಗಿ ಬಿಡುತ್ತೋ ಏನೋ ಅನ್ನೂ ಮುಜುಗರದ ಭಾವನೆ ಉಂಟಾಗುತ್ತೆ. ಇದ್ಯಾವ ಪರಿಯ ಶಿಕ್ಷಣ ಪದ್ಧತಿ? ಇದು ಬೇಕಾ? ಅನ್ನೋದೇ ಈಗ ವೈರಲ್ ಆಗಿರುವ ವಿಷಯ.

ರಿಯಾ ಟ್ವಿಟ್ಟರ್‌ನಲ್ಲಿ ಕೇಳಿರುವ ಪ್ರಶ್ನೆಗೆ ನೆಟ್ಟಿಗರು ದನಿಗೂಡಿಸುತ್ತಿದ್ದಾರೆ. ಒಬ್ಬರು ‘6ನೇ ತರಗತಿಯಲ್ಲಿದ್ದಾಗ, ನನ್ನ ಸಹಪಾಠಿಯೊಬ್ಬಳಿಗೆ ಮುಟ್ಟಾದಾಗ ಆಕೆಯ ಬಿಳಿ ಬಣ್ಣದ ಸ್ಕರ್ಟ್‌ ಗೆ ರಕ್ತದ ಕಲೆಗಳು ಅಂಟಿತ್ತು. ಆಗ ಆಕೆ ಅನುಭವಿಸಬಾರದ ಹಿಂಸೆ ಅನುಭವಿಸಿದ್ದಳು. ಆಗ ಆಕೆಯ ತಂದೆ-ತಾಯಿಯೇ ಶಾಲೆಗೆ ಬರಬೇಕಾಯಿತು’ ಎಂದಿದ್ದಾರೆ.

ಇನ್ನೊರ್ವರು ‘ನಮ್ಮ ಶಾಲೆಯಲ್ಲಿ ನೀಲಿ ಬಣ್ಣದ ಸಮವಸ್ತ್ರವಿತ್ತು. ಅದರಲ್ಲೂ ಮುಟ್ಟಿನ ಕಲೆಗಳು ಕಾಣಿಸುತ್ತಿತ್ತು. ಆಗ ಯಾರೂ ಸಹಾಯಕ್ಕೆ ಬಂದಿರಲಿಲ್ಲ. ಆಗ ಹೆಚ್ಚೆಂದರೇ ಆಪ್ತ ಸ್ನೇಹಿತರು ಸಹಾಯಕ್ಕೆ ಮುಂದೆ ಬಂದು ಪಿರಿಯಡ್ ಕಲೆ ಮರೆ ಮಾಡೋದಕ್ಕೆ ಜಾಕೆಟ್ ಕೊಡಬಹುದು ಅಷ್ಟೆ. ಹೀಗೆ ಒಬ್ಬೊಬ್ಬರು ತಮ್ಮ ಒಂದೊಂದು ಅನುಭವನ್ನ ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...