ಕೆಲ ಮಹಿಳೆಯರು ಎಷ್ಟು ಪ್ರಯತ್ನಪಟ್ಟರೂ ತಾಯಿಯಾಗುವುದಿಲ್ಲ. ಮತ್ತೆ ಕೆಲ ಮಹಿಳೆಯರಿಗೆ ಬೇಡವೆಂದ್ರೂ ಮಕ್ಕಳಾಗುತ್ವೆ. ಇದಕ್ಕೆ ಯುಕೆಯ 39 ವರ್ಷದ ಕೇಟ್ ಹರ್ಮನ್ ಉತ್ತಮ ನಿದರ್ಶನ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಕೇಟ್ ಗರ್ಭ ಧರಿಸುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಯುಕೆ ನ ಕೇಟ್ ಹರ್ಮನ್, ಜನನ ನಿಯಂತ್ರಣ ಮಾತ್ರೆಗಳನ್ನು ತೆಗೆದುಕೊಂಡರೂ, 5 ಮಕ್ಕಳ ತಾಯಿಯಾಗಿದ್ದಾಳೆ. ಇಷ್ಟೇ ಅಲ್ಲ, ಮೂರು ಬಾರಿ ಗರ್ಭ ಧರಿಸಿದ್ದಳಂತೆ. ಕೇಟ್ ಹರ್ಮನ್ ಪ್ರಕಾರ, ಜುಲೈ 2015 ರಲ್ಲಿ ಪತಿ, ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರಂತೆ. ಆದ್ರೂ ಕೇಟ್, ಗರ್ಭ ಧರಿಸುತ್ತಿದ್ದಾಳಂತೆ.
ತನ್ನ ಕುಟುಂಬ ಈಗಾಗಲೇ ಪೂರ್ಣಗೊಂಡಿದೆ ಎಂದು ಕೇಟ್ ಹೇಳುತ್ತಾಳೆ. ಹಿರಿಯ ಮಗನಿಗೆ 20 ವರ್ಷ. ಕಿರಿಯ ಮಗುವಿಗೆ 2 ವರ್ಷ. ಕೇಟ್, ಮೊದಲ ಮಗು ಜನರಿಸಿದ ನಂತ್ರ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳಲು ಶುರು ಮಾಡಿದ್ದಳಂತೆ. ಇದರ ಹೊರತಾಗಿಯೂ ಆಕೆ ಗರ್ಭ ಧರಿಸಿದ್ದಾಳೆ ಎರಡನೆಯ ಮತ್ತು ಮೂರನೇ ಬಾರಿಯೂ ಗರ್ಭ ನಿರೋಧಕ ಮಾತ್ರೆ ಪರಿಣಾಮ ಬೀರಲಿಲ್ಲವಂತೆ.
ಕೇಟ್‌ನ ಎಲ್ಲಾ ಪ್ರಯತ್ನ ವಿಫಲವಾದ್ಮೇಲೆ, ಪತಿ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದನಂತೆ. ಆದ್ರೂ ಗರ್ಭಧಾರಣೆ ಸಮಸ್ಯೆ ನಿಲ್ಲಲಿಲ್ಲ. ಕೇಟ್ ಪತಿಯ ವೀರ್ಯಾಣು ಎಣಿಕೆ ಮಾಡಿದಾಗ, ಆತನ ವೀರ್ಯವು ಶೇಕಡಾ 99.9 ವರೆಗೂ ಪರಿಣಾಮಕಾರಿ ಎಂಬುದು ಗೊತ್ತಾಗಿದೆ.