ಅಂತರ್ಜಾಲದಲ್ಲಿ ಧೂಳೆಬ್ಬಿಸಿರುವ ಸಿಂಹಳಿ ಹಾಡು ಮನಿಕೆ ಮಗೆ ಹಿತೆಯ ಮೂಲಕ ಶ್ರೀಲಂಕಾದ ಗಾಯಕ ಯೊಹಾನಿ ಡಿಲೋಕಾ ಡಿ ಸಿಲ್ವಾ ಖ್ಯಾತಿಯ ಉತ್ತುಂಗ ತಲುಪಿದ್ದಾರೆ.
ಶ್ರೀಲಂಕಾ ಹಾಗೂ ಭಾರತದೆಲ್ಲೆಡೆ ಜನಪ್ರಿಯವಾಗಿರುವ ಈ ಹಾಡಿಗೆ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ತಮ್ಮದೇ ಟಚ್ ಕೊಟ್ಟು ಕೊರಿಯೋಗ್ರಫಿ ಮಾಡಿದ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಬಂದಿದ್ದಾರೆ.
Big News: ಡ್ರೋನ್ ಗಳ ಟ್ರಾಫಿಕ್ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಇದೀಗ ಈ ಕ್ರೇಜ಼್ಗೆ ಹೊಸ ಟಚ್ ಕೊಟ್ಟಿರುವ ರಕ್ಷಾ ಪ್ರಸ್ನಾಯಿ ಹೆಸರಿನ ಮಹಿಳೆಯೊಬ್ಬರು, ಬೆಲ್ಲಿ ಡ್ಯಾನ್ಸ್ ಸ್ಟೆಪ್ಗಳನ್ನು ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ. ಐಟಿ ಉದ್ಯೋಗಿಯಾಗಿದ್ದ ರಕ್ಷಾ ಸದ್ಯ ಬೆಲ್ಲಿ ಡ್ಯಾನ್ಸರ್ ಆಗಿದ್ದಾರೆ.
ಕಪ್ಪು ಬಣ್ಣದ ಟಾಪ್ ಹಾಗೂ ಸ್ಕರ್ಟ್ನಲ್ಲಿ ಮಿಂಚುತ್ತಿರುವ ರಕ್ಷಾ, ಈ ಹಾಡಿಗೆ ತಮ್ಮದೇ ಆದ ಸ್ಟೆಪ್ಗಳನ್ನು ಭಾರೀ ವಿಶ್ವಾಸದಲ್ಲಿ ಹಾಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
https://www.youtube.com/watch?v=6HFLp89gbLU