alex Certify BIG NEWS: ʼಸುಪ್ರೀಂʼ ಮೆಟ್ಟಿಲೇರಿದ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ʼಸುಪ್ರೀಂʼ ಮೆಟ್ಟಿಲೇರಿದ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣ

ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸ್ತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರಕರಣದ ಸಂತ್ರಸ್ತೆ 72ವರ್ಷದ ಮಹಿಳೆ ಕೋರ್ಟ್ ಮೊರೆಹೋಗಿದ್ದು ಪ್ರಕರಣದ ಕುರಿತು ಸುದ್ದಿ ವರದಿಗಳ ಪ್ರಸಾರವನ್ನು ಮುಂದೂಡುವಂತೆ ಕೋರಿದ್ದಾರೆ.

ಘಟನೆಯ ಬಗ್ಗೆ ವಿಮಾನಯಾನ ಸಂಸ್ಥೆಯು ಮಾಹಿತಿಯನ್ನು ಸೋರಿಕೆ ಮಾಡಿದ್ದು, ಮಾಧ್ಯಮಗಳು ಇದನ್ನು ತಮ್ಮ ದೃಷ್ಟಿಕೋನದಲ್ಲಿ ಪ್ರಸಾರ ಮಾಡುತ್ತಿವೆ. ಇದರಿಂದ ಸಂತ್ರಸ್ತರು ಮತ್ತು ಆರೋಪಿಯ ಮೇಲೆ ಪರಿಣಾಮ ಬೀರಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆಯ ವಿಭಿನ್ನ ಆವೃತ್ತಿಗಳನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ್ದಕ್ಕಾಗಿ ಮಹಿಳೆ ತನ್ನ ಅರ್ಜಿಯಲ್ಲಿ ವಿಮಾನಯಾನ ಕಂಪನಿಯನ್ನು ದೂಷಿಸಿದ್ದಾರೆ. ಏರ್ ಇಂಡಿಯಾ ಮತ್ತು ಡಿಜಿಸಿಎ ಪ್ರಕರಣದಲ್ಲಿ ತನ್ನ ಜವಾಬ್ದಾರಿಯನ್ನು ನಿಭಾಯಿಸಲು ವಿಫಲವಾಗಿರುವುದರಿಂದ ಕೋರ್ಟ್ ಮೊರೆ ಹೋಗಿರುವುದಾಗಿ ಮಹಿಳೆ ತಿಳಿಸಿದ್ದಾರೆ.

ಅರ್ಜಿದಾರರ ದೂರಿನ ಸೋರಿಕೆ, ಎಫ್‌ಐಆರ್ ಸೋರಿಕೆಯಾಗಿದ್ದು ಮಾಧ್ಯಮಗಳು ತಮ್ಮದೇ ಊಹೆ ಮತ್ತು ವಿಶ್ಲೇಷಣೆ ಆಧಾರದ ಮೇಲೆ ಸುದ್ದಿ ಪ್ರಕಟಿಸುತ್ತಿವೆ. ಇದರಿಂದ ದೂರುದಾರರ ಹಕ್ಕು ಚ್ಯುತಿಯಾಗಿದೆ . ಸುದ್ದಿ ಪ್ರಸಾರದಲ್ಲಿ ಹಲವಾರು ಲೋಪಗಳು ಸಂಭವಿಸಿವೆ. ಅರ್ಜಿದಾರರ ಅಥವಾ ಅಪರಾಧಿಗಳ ಹಕ್ಕುಗಳನ್ನು ಪರಿಗಣಿಸದೆ ಅವರ ನಿರೂಪಣೆಯೊಂದಿಗೆ ಹೊಂದಿಕೆಯಾಗುವ ಸಾಕ್ಷಿಗಳನ್ನು ಮಾತ್ರ ಏರ್ ಇಂಡಿಯಾ ಆಯ್ದು ಸೋರಿಕೆ ಮಾಡಿದೆ ಎಂದು ಮಹಿಳೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಅಂತಹ ನಿದರ್ಶನಗಳು ತನಗೆ ಅಗಾಧವಾದ ಮಾನಸಿಕ ಸಂಕಟವನ್ನು ಉಂಟುಮಾಡಿವೆ. ಸಂವಿಧಾನದ 21 ನೇ ವಿಧಿಯು ಖಾತರಿಪಡಿಸಿದಂತೆ ಘನತೆಯಿಂದ ಬದುಕುವ ಹಕ್ಕಿನ ಮೇಲೆ ಪರಿಣಾಮ ಬೀರಿದೆ ಎಂದು ಅವರು ಪ್ರತಿಪಾದಿಸಿದರು.

ಕಳೆದ ವರ್ಷ ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆ ಮದ್ಯದ ಅಮಲಿನಲ್ಲಿದ್ದ ಆರೋಪಿ ಶಂಕರ್‌ ಮಿಶ್ರಾ ಮೂತ್ರ ವಿಸರ್ಜನೆ ಮಾಡಿದ್ದ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...