alex Certify ಕಾಟನ್ ಕ್ಯಾಂಡಿ ಬಳಸಿ ಮಹಿಳೆಯಿಂದ ಮ್ಯಾಗಿ ಖಾದ್ಯ ತಯಾರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಟನ್ ಕ್ಯಾಂಡಿ ಬಳಸಿ ಮಹಿಳೆಯಿಂದ ಮ್ಯಾಗಿ ಖಾದ್ಯ ತಯಾರಿ…!

ಈ ಫುಡ್ ಫ್ಯೂಶನ್ ಹೆಸರಿನಲ್ಲಿ ಕಂಡು ಕೇಳರಿಯದ ಮಟ್ಟದಲ್ಲಿ ಚಿತ್ರ ವಿಚಿತ್ರ ಆಹಾರಗಳನ್ನು ಪರಿಚಯಿಸುತ್ತಿರುವ ಲೆಕ್ಕವಿಲ್ಲದಷ್ಟು ನಿದರ್ಶನಗಳು ಆನ್ಲೈನ್‌ನಲ್ಲಿ ವೈರಲ್ ಆಗಿವೆ.

ಇಂಥ ಸಾಲಿಗೆ ಸೇರುವ ಮತ್ತೊಂದು ನಿದರ್ಶನದಲ್ಲಿ, ಕಾಟನ್ ಕ್ಯಾಂಡಿ (ಬಾಂಬೆ ಮಿಠಾಯಿ) ಜೊತೆಗೆ ಮ್ಯಾಗಿ ನ್ಯೂಡಲ್ಸ್‌ ಬಳಸಿ ಹೊಸ ಖಾದ್ಯ ತಯಾರಿಸುತ್ತಿರುವುದನ್ನು ನೋಡಬಹುದು.

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಎಷ್ಟು ಅಪಾಯಕಾರಿ…? ಇಲ್ಲಿದೆ ಈ ಕುರಿತ ಮಾಹಿತಿ

ಇನ್‌ಸ್ಟಾಗ್ರಾಂನಲ್ಲಿ ಇದೀಗ ವೈರಲ್ ಆಗಿರುವ ಈ ವಿಡಿಯೋವನ್ನು ಈಟ್ ದಿಸ್ ಡೆಲ್ಲಿ ಹೆಸರಿನ ಪೇಜ್ ಪೋಸ್ಟ್ ಮಾಡಿದೆ.

ಮೊದಲಿಗೆ ತವಾದಲ್ಲಿ ಬೆಣ್ಣೆ ಹಾಕುವ ಮಹಿಳೆ, ಬಳಿಕ ತರಕಾರಿಗಳನ್ನು ಸಾಟ್ ಮಾಡಿ, ಮ್ಯಾಗಿ, ನೀರು ಮತ್ತು ಮಸಾಲೆ ಹಾಕಿ ಅದಕ್ಕೆ ಉಪ್ಪು ಸೇರಿಸುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಖಾದ್ಯವು ಅರ್ಧ ತಯಾರಾಗುತ್ತಲೇ ಅದಕ್ಕೆ ಕಾಟನ್ ಕ್ಯಾಂಡಿಯೊಂದನ್ನು ಸೇರಿಸುವ ಈ ಮಹಿಳೆ, ಅದು ಖಾದ್ಯದಲ್ಲಿ ಕರಗುವವರೆಗೂ ತಿರುವುತ್ತಾರೆ.

“ಕಾಟನ್ ಕ್ಯಾಂಡಿ ಮ್ಯಾಗಿಯನ್ನು ಪ್ರಯತ್ನಿಸಿ ನೋಡಿದ್ದೀರಾ” ಎಂದು ವಿಡಿಯೋಗೆ ಕ್ಯಾಪ್ಷನ್ ಕೊಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...