ವಾಷಿಂಗ್ಟನ್: ರೂಪದರ್ಶಿಯರು, ಸಿನಿಮಾ ನಟಿಯರು ತಮ್ಮ ಸೌಂದರ್ಯ ಹೆಚ್ಚಿಸುವ ಬಗ್ಗೆ ಅಪಾರವಾದ ಆಸಕ್ತಿ ಹೊಂದಿರುತ್ತಾರೆ. ಮುಖ ಮಾತ್ರವಲ್ಲ ದೇಹದ ವಿವಿಧ ಅಂಗಾಂಗಳ ಸೌಂದರ್ಯಕ್ಕೂ ಕೆಲವರು ಅಪಾರ ಹಣ ವ್ಯಯಿಸುತ್ತಾರೆ. ಹಾಗೆಯೇ ಇಲ್ಲೊಬ್ಬಳು ತನ್ನ ಸೌಂದರ್ಯಕ್ಕಾಗಿ ಬರೋಬ್ಬರಿ $10,000 ಅಂದರೆ 7.4 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾಳೆ.
ಅಮೆರಿಕಾದ ಡ್ಯಾನಿ ಬ್ಯಾಂಕ್ಸ್ ಎಂಬ ಯುವತಿಯು ತನ್ನ ಸೌಂದರ್ಯ ಇಮ್ಮಡಿಗೊಳಿಸಲು ಪೃಷ್ಠಕ್ಕೆ ಚುಚ್ಚುಮದ್ದು ಪಡೆದಿದ್ದಾಳೆ. ಇದಕ್ಕೆ ಬರೋಬ್ಬರಿ 7.4 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾಳೆ. ಅಷ್ಟಾದರೂ ಕೂಡ ಆಕೆಗೆ ತಾನು ನಿರೀಕ್ಷಿಸಿದ ಫಲಿತಾಂಶ ಸಿಕ್ಕಿಲ್ವಂತೆ. ತನ್ನ ಕಥೆಯನ್ನು ಪ್ಲಾಸ್ಟಿಕ್ ಸರ್ಜನ್ ಗಳಾದ ಫಾಲ್ ನಾಸಿಫ್ ಹಾಗೂ ಟೆರ್ರಿ ಡುಬ್ರೊಗೆ ವಿವರಿಸಿದ್ದಾಳೆ.
ಮನೆಯಲ್ಲೇ ಕುಳಿತು ತಿಂಗಳಿಗೆ 80 ಸಾವಿರ ರೂ. ಗಳಿಸಲು ಇಲ್ಲಿದೆ ʼಬಂಪರ್ʼ ಅವಕಾಶ
ತನ್ನ ಸೌಂದರ್ಯ ಇಮ್ಮಡಿಗೊಳಿಸಲು ಬ್ರೆಜಿಲಿಯನ್ ಬಟ್ ಲಿಫ್ಟ್ ವಿಧಾನದ ಬದಲು ಚುಚ್ಚುಮದ್ದು ಪಡೆದಿರುವುದಾಗಿ ವಿವರಿಸಿದ್ದಾಳೆ. ಕೆನ್ನೆಯ ಎರಡೂ ಬದಿಗಳಲ್ಲಿ ಎರಡು ರಂಧ್ರವನ್ನು ಹಾಕಿದರು. ಬಳಿಕ ದೊಡ್ಡದಾದ ಸಿರಿಂಜ್ ತುಂಬಿದರು ಅಂತಾ ವಿವರಿಸಿದ್ದಾಳೆ. ಇದನ್ನು ಕೇಳಿದ ವೈದ್ಯರು ಒಂದು ಕ್ಷಣ ದಂಗಾದರು. ಹಾಗೂ ಬಳಸಿದಂತಹ ವಸ್ತುಗಳ ಬಗ್ಗೆ ಪ್ರಶ್ನಿಸಿದ್ದಾರೆ. ಈ ತರಹ ಮಾಡುವುದರಿಂದ ಹಾನಿಕಾರಕ ಫಲಿತಾಂಶಗಳಿಗೆ ಕಾರಣವಾಗಬಹುದು ಅಂತಾ ತಿಳಿ ಹೇಳಿದ್ದಾರೆ.
ಡ್ಯಾನಿಯ ಬಲ ಪೃಷ್ಠವು ಸರಿಪಡಿಸಲಾಗದ ರೀತಿ ಸಂಪೂರ್ಣ ಕುಸಿತಕ್ಕೊಳಗಾದಂತಿದೆ. ಇದರಿಂದ ಹತಾಶೆಗೊಂಡಿರುವ ಆಕೆ ವೈದ್ಯರಲ್ಲಿ ಸಹಾಯ ಯಾಚಿಸಿದ್ದಾಳೆ. ಆದರೆ ಅದನ್ನು ಇದ್ದ ಹಾಗೆಯೇ ಬಿಡಬೇಕು ಅಂತಾ ವೈದ್ಯರು ಸೂಚನೆ ನೀಡಿದ್ದಾರೆ. ಪೃಷ್ಠದ ಕೊಬ್ಬಿನ ಚುಚ್ಚುಮದ್ದು ಎಲ್ಲಾ ಪ್ಲಾಸ್ಟಿಕ್ ಸರ್ಜರಿಗಳಲ್ಲಿ ಅತ್ಯಂತ ಅಪಾಯಕಾರಿ ವಿಧಾನವಾಗಿದೆ ಎಂದು ವಿವರಿಸಿದ್ದಾರೆ.