ಬ್ರಿಟನ್ನ ಆಂಟಿಕ್ಸ್ ರೋಡ್ಶೋನ ಅತಿಥಿಯೊಬ್ಬರು ತಮ್ಮ ಬಳಿ ಇರುವ ಹಳೆಯ ಬಾರ್ಬಿ ಗೊಂಬೆಯ ಮೌಲ್ಯ ಬರೋಬ್ಬರಿ 1.5 ಲಕ್ಷ ರೂಪಾಯಿ ಎಂದು ತಿಳಿದು ಶಾಕ್ ಆಗಿದ್ದಾರೆ.
ಹಳೆಯ ಗೊಂಬೆಗಳ ಪ್ರದರ್ಶನ ಕಾರ್ಯಕ್ರಮಕ್ಕೆ ಈ ಮಹಿಳೆ ಕೂಡ 1960ರ ದಶಕದಲ್ಲಿ ತಾನು ಖರೀದಿ ಮಾಡಿದ್ದ ಗೊಂಬೆಯನ್ನ ತಂದಿದ್ದರು.
5 ದಶಕಗಳ ಹಿಂದಿನ ಗೊಂಬೆಯು ಇನ್ನೂ ಚೆನ್ನಾಗಿಯೇ ಇರೋದನ್ನ ಕಂಡು ಖುಷಿಪಟ್ಟ ತಜ್ಞ ಜ್ಯುಡಿತ್ ಮಿಲ್ಲರ್ ಎಂಬವರು, 5 ದಶಕಗಳ ಹಿಂದಿನ ಬಾರ್ಬಿ ಗೊಂಬೆಯು ಇಷ್ಟು ಒಳ್ಳೆಯ ಸ್ಥಿತಿಯಲ್ಲಿ ಇದ್ದಿದ್ದನ್ನು ನಾನು ಕಂಡೇ ಇಲ್ಲ ಎಂದು ಆಶ್ಚರ್ಯ ಹೊರಹಾಕಿದ್ರು.
ಮಿಲ್ಲರ್ ಬಳಿಕ ಈ ಗೊಂಬೆಯು 1.5 ಲಕ್ಷ ರೂಪಾಯಿ ಬೆಲೆಬಾಳಲಿದೆ ಎಂದು ಹೇಳಿದ್ದಾರೆ. ಗೊಂಬೆಯ ಪ್ರಸ್ತುತ ಮೌಲ್ಯವನ್ನ ಕೇಳಿದ ಮಹಿಳೆ ಒಮ್ಮೆಲೆ ದಿಗ್ಬ್ರಾಂತರಾಗಿದ್ದಾರೆ. ಕೆಲ ಕ್ಷಣಗಳ ಕಾಲ ಮಹಿಳೆ ಮಿಲ್ಲರ್ ಹೇಳಿದ್ದನ್ನ ನಂಬಲಾರದೇ ಹೋಗಿದ್ದಾರೆ.