alex Certify ಹಾಡಹಗಲೇ ಮೆಟ್ರೋ ಹಳಿ ಮೇಲೆ ಹಾರಿದ ಯುವತಿ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಹಗಲೇ ಮೆಟ್ರೋ ಹಳಿ ಮೇಲೆ ಹಾರಿದ ಯುವತಿ ರಕ್ಷಣೆ

ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದ ನೀಲಿ ಮಾರ್ಗದಲ್ಲಿ ರೈಲಿನ ಹಳಿಯ ಮೇಲೆ ಹಾರಿದ ಯುವತಿಯನ್ನು ರಕ್ಷಿಸುವಲ್ಲಿ ಸಿಐಎಸ್​ಎಫ್​​ ಪಡೆ ಯಶಸ್ವಿಯಾಗಿದೆ.

ಪಲಂ ನಿವಾಸಿಯಾದ 21 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಹಳಿಯ ಮೇಲೆ ಜಿಗಿದಿದ್ದಳು ಎಂದು ಸಿಐಎಸ್​ಎಫ್​​​ ತನ್ನ ಅಧಿಕೃತ ಹೇಳಿಕೆ ಮೂಲಕ ಮಾಹಿತಿ ನೀಡಿದೆ.

ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು

ಯುವತಿ ಈ ಕೃತ್ಯಕ್ಕೆ ಮುಂದಾಗಿರೋದನ್ನ ಗಮನಿಸಿದ ಟ್ರೇನ್​ ಆಪರೇಟರ್​ ಕೂಡಲೇ ಸಿಐಎಸ್​ಎಫ್​ ತಂಡಕ್ಕೆ ಮಾಹಿತಿ ರವಾನಿಸಿದರು. ನಿಲ್ದಾಣದಲ್ಲೇ ಇದ್ದ ಸಿಐಎಸ್​ಎಫ್​​ ತಂಡ ಕೂಡಲೇ ಯುವತಿ ರಕ್ಷಣೆಗೆ ಧಾವಿಸಿದ್ರು ಹಾಗೂ ಟ್ರ್ಯಾಕ್​ನಿಂದ ಯುವತಿಯನ್ನು ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಟ್ರೋ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಯುವತಿಯನ್ನು ಕೂಡಲೇ ಮಾತಾ ಚನನ್​ ದೇವಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...