ದೆಹಲಿಯ ಜನಕಪುರಿ ಪಶ್ಚಿಮ ಮೆಟ್ರೋ ನಿಲ್ದಾಣದ ನೀಲಿ ಮಾರ್ಗದಲ್ಲಿ ರೈಲಿನ ಹಳಿಯ ಮೇಲೆ ಹಾರಿದ ಯುವತಿಯನ್ನು ರಕ್ಷಿಸುವಲ್ಲಿ ಸಿಐಎಸ್ಎಫ್ ಪಡೆ ಯಶಸ್ವಿಯಾಗಿದೆ.
ಪಲಂ ನಿವಾಸಿಯಾದ 21 ವರ್ಷದ ಯುವತಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಹಳಿಯ ಮೇಲೆ ಜಿಗಿದಿದ್ದಳು ಎಂದು ಸಿಐಎಸ್ಎಫ್ ತನ್ನ ಅಧಿಕೃತ ಹೇಳಿಕೆ ಮೂಲಕ ಮಾಹಿತಿ ನೀಡಿದೆ.
ಟೋಕಿಯೊ ಒಲಂಪಿಕ್ಸ್: ಸೆಮಿಫೈನಲ್ ತಲುಪಿದ ಭಾರತದ ಕುಸ್ತಿಪಟುಗಳು
ಯುವತಿ ಈ ಕೃತ್ಯಕ್ಕೆ ಮುಂದಾಗಿರೋದನ್ನ ಗಮನಿಸಿದ ಟ್ರೇನ್ ಆಪರೇಟರ್ ಕೂಡಲೇ ಸಿಐಎಸ್ಎಫ್ ತಂಡಕ್ಕೆ ಮಾಹಿತಿ ರವಾನಿಸಿದರು. ನಿಲ್ದಾಣದಲ್ಲೇ ಇದ್ದ ಸಿಐಎಸ್ಎಫ್ ತಂಡ ಕೂಡಲೇ ಯುವತಿ ರಕ್ಷಣೆಗೆ ಧಾವಿಸಿದ್ರು ಹಾಗೂ ಟ್ರ್ಯಾಕ್ನಿಂದ ಯುವತಿಯನ್ನು ಹೊರಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೆಟ್ರೋ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಯುವತಿಯನ್ನು ಕೂಡಲೇ ಮಾತಾ ಚನನ್ ದೇವಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎನ್ನಲಾಗಿದೆ.