
ತನ್ನ ಮೊಬೈಲ್ ಫೋನ್ ಕದ್ದ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದ ಮಹಿಳೆ ಗಾಯಗೊಂಡಿರೋ ಘಟನೆ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ನಡೆದಿದೆ. ರೈಲು ಕಂಪಾರ್ಟ್‌ಮೆಂಟ್‌ನಿಂದ ಕಳ್ಳ ಮೊಬೈಲ್ ಕದ್ದು ಪರಾರಿಯಾಗ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಕ್ಯಾನಿಂಗ್ ಉಪ-ಜಿಲ್ಲಾ ಆಸ್ಪತ್ರೆಯ ನರ್ಸ್ ಗುರುವಾರ ಸಂಜೆ ಆಸ್ಪತ್ರೆಯ ಕರ್ತವ್ಯವನ್ನು ಮುಗಿಸಿದ ನಂತರ ರೈಲಿನಲ್ಲಿ ಮನೆಗೆ ತೆರಳುತ್ತಿದ್ದರು. ಕ್ಯಾನಿಂಗ್-ಸೀಲ್ದಾಹ್ ರೈಲಿನಲ್ಲಿ ಮಟ್ಲಾ ಹಾಲ್ಟ್ ನಿಲ್ದಾಣದ ಬಳಿ, ಕಳ್ಳನೊಬ್ಬ ಚಲಿಸುವ ರೈಲು ಕಂಪಾರ್ಟ್‌ಮೆಂಟ್‌ನಿಂದ ಆಕೆಯ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಜಿಗಿದು ಪರಾರಿಯಾಗಿದ್ದಾನೆ.
ಮಹಿಳೆ ಕೂಡ ಕಳ್ಳನನ್ನು ಹಿಡಿಯಲು ಚಲಿಸುವ ರೈಲಿನಿಂದ ಜಿಗಿದಿದ್ದಾರೆ. ಆದರೆ ಈ ವೇಳೆ ನಿಲ್ದಾಣದಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಮಾಹಿತಿ ಪಡೆದ ಜಿಆರ್‌ಪಿ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಕ್ಯಾನಿಂಗ್ ಉಪವಿಭಾಗೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ಕುರಿತು ಜಿಆರ್‌ಪಿ ಮತ್ತು ಆರ್‌ಪಿಎಫ್ ತನಿಖೆ ಆರಂಭಿಸಿದೆ.