alex Certify ಪ್ರಾಣವನ್ನೇ ಪಣಕ್ಕಿಟ್ಟು ಮೊಬೈಲ್‌ ಕಳ್ಳನನ್ನು ಹಿಡಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣವನ್ನೇ ಪಣಕ್ಕಿಟ್ಟು ಮೊಬೈಲ್‌ ಕಳ್ಳನನ್ನು ಹಿಡಿದ ಮಹಿಳೆ

ಮೊಬೈಲ್​ ಕಳ್ಳ ಮಹಿಳೆಯನ್ನ ಟ್ರಕ್​ ಕಡೆಗೆ ತಳ್ಳಿದ ಬಳಿಕ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದು ಮಾತ್ರವಲ್ಲದೇ ಆರೋಪಿಯನ್ನ ಬೆನ್ನಟ್ಟಿ ಆತನ ಹಿಡಿಯುವಲ್ಲಿಯೂ ಯಶಸ್ವಿಯಾಗಿದ್ದಾಳೆ.

ಉತ್ತರ ಪ್ರದೇಶ ಬುಲಂದ್​ ಶಹರ್​ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಫೋನ್​​ ಕಸಿದುಕೊಂಡ ಕಳ್ಳ ಮಹಿಳೆಯನ್ನ ಟ್ರಕ್​ ಬದಿಗೆ ತಳ್ಳಿದ್ದಾನೆ. ಆದರೆ 26 ವರ್ಷದ ಮೀನಾ ವೇಗವಾಗಿ ಚಲಿಸುತ್ತಿದ್ದ ಟ್ರಕ್​​ನಿಂದ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೇ ಆತನನ್ನ ಬೆನ್ನಟ್ಟಿ ಆರೋಪಿಯನ್ನ ದಾರಿಹೋಕರ ಸಹಾಯದಿಂದ ಹಿಡಿದಿದ್ದಾಳೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮೀನಾ, ನಾನು ಕಾಲೇಜಿನಲ್ಲಿ ಕೆಲಸ ಮಾಡುತ್ತೇನೆ. ನಾನು ಮನೆಗೆ ಹಿಂದಿರುತ್ತಿದ್ದ ವೇಳೆ ನನ್ನ ಹಿಂದೆ ಬಂದ ಆರೋಪಿಗಳು ನನ್ನ ಮೊಬೈಲ್​ ಫೋನನ್ನ ಕಸಿದುಕೊಂಡು ನನ್ನನ್ನ ರಸ್ತೆ ಬದಿಗೆ ತಳ್ಳಿದ್ರು. ನಾನು ಟ್ರಕ್​ ಮುಂದೆ ಹೋಗಿ ಬಿದ್ದೆ. ಆದರೆ ಹೇಗೋ ಮಾಡಿ ಪ್ರಾಣಾಪಾಯದಿಂದ ಬಚಾವಾದೆ. ಹಾಗೂ ದಾರಿಹೋಕರ ಸಹಾಯದಿಂದ ಆರೋಪಿಯನ್ನ ಹಿಡಿದದ್ದು ಮಾತ್ರವಲ್ಲದೇ ನನ್ನ ಮೊಬೈಲ್​ನ್ನೂ ವಾಪಾಸ್​ ಪಡೆದೆ ಎಂದು ಹೇಳಿದ್ದಾಳೆ.

— TOIWestUP (@TOIWestUP) January 18, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...