alex Certify ಬರೋಬ್ಬರಿ 450 ಕೆ.ಜಿ. ತೂಕದ ಮೀನನ್ನು ಹಿಡಿದ ಮಹಿಳೆ: ಭೇಷ್ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರೋಬ್ಬರಿ 450 ಕೆ.ಜಿ. ತೂಕದ ಮೀನನ್ನು ಹಿಡಿದ ಮಹಿಳೆ: ಭೇಷ್ ಎಂದ ನೆಟ್ಟಿಗರು

Woman hauls 450kg bluefin tuna fish onto her boat all by herself, netizens  in awe of her skills [WATCH] | Trending & Viral Newsಒಂದು ದೊಡ್ಡ/ಭಾರಿ ಗಾತ್ರದ ಮೀನನ್ನು ಎಳೆಯಲು ಅಗಾಧ ಪ್ರಮಾಣದ ಶಕ್ತಿ ಬೇಕಾಗುತ್ತದೆ. ಈ ಬಗ್ಗೆ ಸ್ವತಃ ಮೀನುಗಾರರನ್ನೇ ಕೇಳಿದ್ರೆ ಸಾಕು ನಿಮಗೆ ಮಾಹಿತಿ ದೊರೆಯುತ್ತದೆ. ಸಣ್ಣ ಪ್ರಮಾಣದ ಮೀನುಗಳನ್ನು ಸುಲಭವಾಗಿ ಎಳೆದು ದೋಣಿಗೆ ಹಾಕಬಹುದು. ಆದರೆ, ದೊಡ್ಡ ಮೀನುಗಳನ್ನು ಎಳೆಯಲು ಭಾರಿ ಶ್ರಮ ಹಾಕಬೇಕಾಗುತ್ತದೆ.

ಅಂದಹಾಗೆ, ಯುಎಸ್ ನ ಹ್ಯಾಂಪ್ಟನ್ ಬೀಚ್‌ನಿಂದ 450 ಕೆ.ಜಿ ತೂಕದ ಬ್ಲೂಫಿನ್ ಟ್ಯೂನವನ್ನು ತನ್ನ ದೋಣಿಯಲ್ಲಿ ಸಾಗಿಸಲು ಏಕಾಂಗಿಯಾಗಿ ನಿರ್ವಹಿಸಿದ ಮಹಿಳೆಯೊಬ್ಬಳ ಬಗ್ಗೆ ಜನರು ದಿಗ್ಭ್ರಮೆಗೊಂಡಿದ್ದಾರೆ.

ಪಿಎಫ್‌ ಗ್ರಾಹಕರಿಗೆ ಸಿಗುತ್ತಾ ಗುಡ್‌ ನ್ಯೂಸ್…?

ರೆಡ್ಡಿಟ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಕ್ಲಿಪ್ ಮೀನುಗಳನ್ನು ಎಳೆಯಲು ಎಷ್ಟು ಕೌಶಲ್ಯ ಮತ್ತು ಶ್ರಮವನ್ನು ತೆಗೆದುಕೊಂಡಿದೆ ಎಂಬುದನ್ನು ತೋರಿಸುತ್ತದೆ. ಭಾರಿ ಗಾತ್ರದ ಮೀನು ಎಳೆದಿರುವ ಸಿಕಾಲೆ ಅವರು ಬಹಳ ಸಮಯದಿಂದ ಮೀನುಗಾರಿಕೆ ಮಾಡುತ್ತಿಲ್ಲ. ಅವರು 2015 ರಲ್ಲಿ ಟ್ಯೂನ ಮೀನು ಹಿಡಿಯಲು ಪ್ರಾರಂಭಿಸಿದ್ರು. ಹಾಗೂ 2019ರಲ್ಲಿ ದೋಣಿ ಖರೀದಿಸಿದರು ಎಂದು ವರದಿಗಳು ಹೇಳುತ್ತವೆ.

ಆದರೆ, ಕೆಲವೇ ವರ್ಷಗಳಲ್ಲಿ ಅವರು ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. 2021 ರಲ್ಲಿ ಆಕೆಯು 90 ಇಂಚು ಉದ್ದದ, 120 ಕೆ.ಜಿ ತೂಕ ಹೊಂದಿರುವ ಮೀನನ್ನು ಬಲೆಗೆ ಬೀಳಿಸಿದ್ದರು. ಕೆಲ ತಿಂಗಳ ಹಿಂದಷ್ಟೇ ಆಕೆ ಮೆಗಾ ಟ್ಯೂನ ಮೀನು ಸೆರೆ ಹಿಡಿದಿದ್ದಳು. ಈ ಬಾರಿ 450 ಕೆ.ಜಿ. ತೂಕದ ಬ್ಲೂಫಿನ್ ಟ್ಯೂನ ಮೀನು ಹಿಡಿಯುವ ಮೂಲಕ ನೆಟ್ಟಿಗರ ಮನಗೆದ್ದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...