alex Certify Video | ಹುಟ್ಟುಹಬ್ಬಕ್ಕೆ ಪತಿ – ಮಗಳಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Video | ಹುಟ್ಟುಹಬ್ಬಕ್ಕೆ ಪತಿ – ಮಗಳಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆ

ತಮ್ಮ ಹುಟ್ಟುಹಬ್ಬದ ದಿನದಾರಂಭಕ್ಕೆ ಮುದ್ದು ಮಗಳು ಹಾಗೂ ಪತಿಯಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆಯೊಬ್ಬರ ವಿಡಿಯೋ ನೆಟ್ಟಿಗರಲ್ಲಿ ಹೊಸ ಫ್ಯಾಮಿಲಿ ಗೋಲ್ ಹುಟ್ಟುಹಾಕಿದೆ.

ಮಹಿಳೆ ಮಲಗಿದ್ದ ಕೋಣೆಗೆ ನಡೆದು ಬರುವ ಅಪ್ಪ-ಮಗಳ ಜೋಡಿ, ’ಹ್ಯಾಪಿ ಬರ್ತಡೇ’ ಹಾಡುವ ಮೂಲಕ ಆಕೆಯನ್ನು ನಿದ್ರೆಯಿಂದ ಎಬ್ಬಿಸಿದ್ದಾರೆ.

ಇನ್ನೂ ಅರ್ಧಂಬರ್ಧ ನಿದ್ರೆಯಲ್ಲಿದ್ದ ಮಹಿಳೆಗೆ ತನ್ನ ಮುದ್ದಿನ ಮಗಳು ಹುಟ್ಟುಹಬ್ಬದ ಉಡುಗೊರೆ ಕೊಟ್ಟಿದ್ದು ಭಾರೀ ಖುಷಿ ಕೊಟ್ಟಿದ್ದು ಆಕೆಯ ಪ್ರತಿಕ್ರಿಯೆಗಳು ನೆಟ್ಟಿಗರಿಗೆ ಬಲು ಇಷ್ಟವಾಗಿದೆ.

ಪುಟಾಣಿ ಬಾಲೆ ತನ್ನ ಮುದ್ದು ಮುದ್ದು ಭಾಷೆಯಲ್ಲೇ ತನ್ನ ಮಮ್ಮಿಗೆ ’ಹ್ಯಾಪಿ ಬರ್ತಡೇ’ ಹೇಳುತ್ತಿರುವುದಂತೂ ಭಾರೀ ಕ್ಯೂಟ್ ಆಗಿದ್ದು, ಅವಳು ಕಪ್ ಕೇಕ್ ಹಿಡಿದುಕೊಂಡು ತನ್ನಮ್ಮನಿಗೆ ಕೊಡುವ ಬಗೆಯೂ ಸಹ ಬಲು ಮುದ್ದಾಗಿದೆ ಎಂದು ನೆಟ್ಟಿಗರು ಕೊಂಡಾಡುತ್ತಾ ಕಾಮೆಂಟ್‌ಗಳನ್ನು ಹಾಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...