ಯಾವುದೇ ಎಲೆಕ್ಟ್ರಿಕ್ ವಸ್ತುಗಳನ್ನ ಹಾಗೂ ಮಷಿನ್ಗಳನ್ನ ಸುಖಾ ಸುಮ್ಮನೇ ಮುಟ್ಟಬಾರದು ಎಂದು ಹೇಳ್ತಾರೆ. ಇವುಗಳಿಂದ ಜೀವಕ್ಕೆ ಅಪಾಯ ಉಂಟಾಗೋ ಸಾಧ್ಯತೆ ಇರೋದ್ರಿಂದ ಈ ಮಾತನ್ನ ಪಾಲನೆ ಮಾಡೋದು ಕೂಡ ಒಳ್ಳೆಯದೇ. ಆದರೆ ಶೌಚಾಲಯಗಳ ವಿಚಾರದಲ್ಲಿ ಈ ಮಾತು ಅನ್ವಯವಾಗೋದಿಲ್ಲ.
ಆದರೆ ಸಾರ್ವಜನಿಕ ಶೌಚಾಲಯಗಳನ್ನ ಬಳಕೆ ಮಾಡೋವಾಗ ಕೊಂಚ ಎಚ್ಚರ ಅಗತ್ಯ. ಸಾರ್ವಜನಿಕ ಶೌಚಾಲಯಗಳನ್ನ ಬಳಕೆ ಮಾಡೋವಾಗ ಅಲ್ಲಿ ಫ್ಲಶ್ ಮಾಡೋದು ಹೇಗೆ ಎಂಬ ಗೊಂದಲ ಕಾಡೋದು ಸಹಜ. ಒಂದೊಂದು ಕಡೆ ಒಂದೊಂದು ರೀತಿಯ ಸೌಲಭ್ಯ ಇರೋದ್ರಿಂದ ಇದು ಕೊಂಚ ತ್ರಾಸದಾಯಕ ಎನಿಸಬಹುದು.
ಬ್ರಿಟನ್ನ ಯುವತಿಯೊಬ್ಬಳು ಮಾತ್ರ ಫ್ಲಶ್ ಬಳಕೆ ಮಾಡೋವಾಗ ಗೊಂದಲಕ್ಕೆ ಒಳಗಾಗಿದ್ದು ಹಾಗಿರಲಿ. ಈಕೆಯ ಕೈಯೇ ಫ್ಲಶ್ ಬಟನ್ ಮಧ್ಯೆ ಸಿಲುಕಿದ್ದು ಪಡಬಾರದ ಪಾಡನ್ನ ಪಟ್ಟಿದ್ದಾಳೆ.
ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ್ದ ಯುವತಿ ಫ್ಲಶ್ ಬಟನ್ನ್ನು ಒತ್ತಲು ಹೋಗಿದ್ದಾಳೆ. ಈಕೆ ಮೇಲೆ ನೇತುಹಾಕಿದ್ದ ಬೋರ್ಡ್ನ ಸೂಚನೆಯಂತೆ ಫ್ಲಶ್ ಬಟನ್ ಬಳಕೆ ಮಾಡಿದ್ದರೂ ಸಹ ಹೇಗೋ ಆಕೆಯ ಕೈ ಫ್ಲಶ್ ಬಟನ್ನ ಒಳಗೆ ಸಿಕ್ಕಿಹಾಕಿಕೊಂಡಿದೆ. ಇದಾದ ಬಳಿಕ ಅಲ್ಲಿನ ಸಿಬ್ಬಂದಿ ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ. ಯುವತಿಯ ಸ್ನೇಹಿತ ಸಂಪೂರ್ಣ ದೃಶ್ಯಾವಳಿಯನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಸಖತ್ ವೈರಲ್ ಆಗಿದೆ.