ಎಲಿಯಟ್ ಕೊಲ್ವಿನ್ ಎಂಬ 25 ವರ್ಷದ ಯುವತಿ, ಬಸ್ಗಳ ಬಗ್ಗೆ ತುಂಬಾ ಗೀಳನ್ನು ಹೊಂದಿದ್ದಾಳೆ. ಅದು ಎಷ್ಟರಮಟ್ಟಿಗೆ ಎಂದರೆ ಈಕೆ ಬಸ್ ರೂಟನ್ನೇ ತನ್ನ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾಳೆ. ತನ್ನ ತೋಳಿನ ಮೇಲೆ ಈ ಹಚ್ಚೆ ಹಾಕಿಸಿಕೊಂಡಿರುವ ಎಲಿಯಟ್, ಬಸ್ಗಳ ಮೇಲಿನ ಪ್ರೀತಿಯನ್ನು ಜಗತ್ತಿಗೆ ತೋರಿಸಲು ಬಯಸಿದ್ದಾಳೆ. ಈ ಟ್ಯಾಟೂದಲ್ಲಿ ಆಕೆ ಬಸ್ ಮಾರ್ಗ ಮತ್ತು ಅದರ ಮೇಲೆ ಚಲಿಸುವ ಬಸ್ಗಳ ಕುರಿತು ತಿಳಿಸಿದ್ದಾಳೆ.
ಇದು ವಿಚಿತ್ರವೆನಿಸಬಹುದು, ಆದರೆ ಎಲಿಯಟ್ ತನ್ನ ತೋಳಿನ ಮೇಲೆ ಮ್ಯಾಂಚೆಸ್ಟರ್ನಿಂದ ಸ್ಟಾಕ್ಪೋರ್ಟ್ಗೆ ಬಸ್ ಮಾರ್ಗ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾಳೆ. ಅವಳು ಪ್ರತಿದಿನ ಈ ಮಾರ್ಗದಲ್ಲಿ ಬಸ್ ಮೇಲೆ ಸಂಚರಿಸುತ್ತಾಳೆ. ಇದರ ಸಂಬಂಧವನ್ನು ಸ್ಮರಿಸಲು ತಾನು ಬಸ್ ರೂಟ್ನ ಹಚ್ಚೆ ಹಾಕಿಸಿಕೊಂಡಿರುವುದಾಗಿ ಹೇಳಿದ್ದಾಳೆ.
ಇಷ್ಟೇ ಅಲ್ಲದೇ ಈ ಮಾರ್ಗದಲ್ಲಿ ಇನ್ನೊಂದು ವಿಶೇಷತೆಯೂ ಇದೆಯಂತೆ. ಅದೇನೆಂದರೆ, ಅವಳು ತನ್ನ ಪಾರ್ಟನರ್ ವಿಲ್ ಸ್ಯಾಂಡರ್ಸ್ ಅನ್ನು ಭೇಟಿಯಾದದ್ದು ಇದೇ ರೂಟ್ನಲ್ಲಿಯಂತೆ. ಇಬ್ಬರೂ 5 ವರ್ಷಗಳಿಂದ ಒಟ್ಟಿಗೆ ಇದ್ದಾರೆ ಮತ್ತು ಈ ಬಸ್ ಮಾರ್ಗದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಾರೆ. ಈಕೆಯ ಈ ಹುಚ್ಚಿಗೆ ಥರಹೇವಾರಿ ಕಮೆಂಟ್ಗಳು ಬರುತ್ತಿವೆ.