alex Certify ಮದುವೆಯಾದ ನಾಲ್ಕೇ ದಿನಕ್ಕೆ ಶವವಾದ ನವ ವಿವಾಹಿತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ನಾಲ್ಕೇ ದಿನಕ್ಕೆ ಶವವಾದ ನವ ವಿವಾಹಿತೆ….!

ಮದುವೆಯಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಹೆಣವಾಗಿದ್ದಾಳೆ. ಘಟನೆ ಬ್ರಿಟನ್‌ನಲ್ಲಿ ನಡೆದಿದೆ. ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತಿಯನ್ನು ಬಂಧಿಸಿದ್ದಾರೆ.

ಪತ್ನಿ ಹತ್ಯೆ ಮಾಡಿ, ಶವವನ್ನು ಸೂಟ್ ಕೇಸ್ ನಲ್ಲಿಟ್ಟಿದ್ದ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ಬಗ್ಗೆ ವಿಚಾರಣೆ ನಡೆಯುತ್ತಿದೆ. ಡಾನ್ ವಾಕರ್ ಎಂಬ ಮಹಿಳೆ ಕಳೆದ ಬುಧವಾರ ಅದ್ಧೂರಿಯಾಗಿ ವಿವಾಹವಾಗಿದ್ದಳು. ಮದುವೆ ದುರಂತ ಸಾವಿಗೆ ಕಾರಣವಾಗುತ್ತೆ ಎಂದು ಆಕೆ ಎಂದೂ ಭಾವಿಸಿರಲಿಲ್ಲ. ಭಾನುವಾರ ಸೂಟ್‌ಕೇಸ್‌ನಲ್ಲಿ ಆಕೆಯ ಶವ ಪತ್ತೆಯಾಗಿದೆ. ಮಹಿಳೆಯ 45 ವರ್ಷದ ಪತಿಯೇ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

BIG NEWS: ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಾಗಿ ಬೆಟ್ಟಿಂಗ್; ಜಮೀನು ಪಣಕ್ಕಿಟ್ಟ ‘ಕೈ’ ಕಾರ್ಯಕರ್ತ

ಡಾನ್ ಕೊಲೆಯಿಂದ ಅವನ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಒಳ್ಳೆ ಸ್ವಭಾವದ ಹಾಗೂ ಪರರಿಗೆ ಸಹಾಯ ಮಾಡುವ ಡಾನ್ ಹತ್ಯೆ ನಂಬಲು ಸಾಧ್ಯವಿಲ್ಲ ಎಂದು ಸ್ನೇಹಿತರು ಹೇಳಿದ್ದಾರೆ. ಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಪರಿಚಿತನೊಬ್ಬ ಕರೆ ಮಾಡಿ, ಡಾನ್ ಕೊಲೆಯಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದ. ಆತನ ಪತ್ತೆ ಕಾರ್ಯ ನಡೆಯುತ್ತಿದೆ. ವಿಚಾರಣೆ ನಂತ್ರವೇ, ಹತ್ಯೆಗೆ ಕಾರಣ ತಿಳಿಯಬೇಕೆಂದು ಪೊಲೀಸರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...