
ಒಬ್ಬೊಬ್ಬರಲ್ಲಿ ಒಂದೊಂದು ರೀತಿಯ ಕಲೆ ಅಡಕವಾಗಿರುತ್ತದೆ. ಏನೂ ಇಲ್ಲದೆಯೂ ತಮ್ಮ ಅಂಗಾಂಗಗಳ ಮೂಲಕವೇ ಕಲೆಯನ್ನು ಬಹಿರಂಗಪಡಿಸುವವರು ಇದ್ದಾರೆ. ಅಂಥದ್ದೇ ಒಂದು ಯುವತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಹುಬ್ಬೇರಿಸುತ್ತಿದ್ದಾರೆ.
ಬೆನ್ನಿನಲ್ಲಿ ಮೂಳೆ ಇದೆಯೋ ಇಲ್ಲವೋ ಎಂಬ ಶಂಕೆ ಹುಟ್ಟಿಸುವಷ್ಟು ರೀತಿಯಲ್ಲಿ ಹಲವರು ಯೋಗ, ವ್ಯಾಯಾಮ ಮಾಡುವುದನ್ನು ಕಾಣಬಹುದು. ಅಷ್ಟು ರೀತಿಯಲ್ಲಿ ಬೆನ್ನನ್ನು ಅವರು ಪಳಗಿಸಿರುವುದನ್ನು ನೋಡಬಹುದು. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್ ಆಗಿದೆ.
ಆದರೆ ಇದರಲ್ಲಿ ಯುವತಿ ತನ್ನ ಮೂಗಿಗೆ ಮೂಳೆ ಇದೆಯೋ, ಇಲ್ಲವೋ ಎನ್ನುವ ರೀತಿಯಲ್ಲಿ ಅದನ್ನು ಪಳಗಿಸಿ ಮಾತನಾಡುವುದನ್ನು ಇದರಲ್ಲಿ ಕಾಣಬಹುದು. ರೊಮಾನಾ ಬ್ರುಂಟ್ಜೆಸ್ ಎಂಬ ಯುವತಿ ಈ ವಿಡಿಯೋ ಅನ್ನು ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾಳೆ.
ಯುವತಿ, ತನ್ನ ತೋರು ಬೆರಳಿನಿಂದ ಮೂಗು ಒತ್ತಿದ ವೀಡಿಯೊವನ್ನು ಹಂಚಿಕೊಂಡಿದ್ದಾಳೆ. ಮೂಳೆ ರಹಿತವಾಗಿರುವಂತೆ ಈಕೆ ತನ್ನ ಮೂಗನ್ನು ಚಪ್ಪಟೆ ಮಾಡಿಕೊಂಡು ಅದರಿಂದ ಮಾತನಾಡಿದ್ದಾಳೆ. ಈ ವಿಡಿಯೋ ನೋಡಿದ ಕೆಲ ಬಳಕೆದಾರರು ಬೆಚ್ಚಿ ಬಿದ್ದಿದ್ದಾರೆ.