ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯ ಕೈಯಲ್ಲಿದ್ದ ಮ್ಯಾಗ್ನಂ ಐಸ್‌ಕ್ರೀಂ ಅನ್ನು ಮೊಬೈಲ್ ಫೋನ್ ಎಂದುಕೊಂಡ ಪೊಲೀಸ್ ಒಬ್ಬರು ಆಕೆಗೆ ದಂಡ ವಿಧಿಸಿದ ಘಟನೆ ಮೆಲ್ಬರ್ನ್ ನಲ್ಲಿ ಜರುಗಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಜರುಗಿದ ಈ ಘಟನೆಯಲ್ಲಿ, ಚಾಲನೆ ವೇಳೆ ಮೊಬೈಲ್ ಫೋನ್ ಬಳಸಿದರೆಂದು ಮೈಕೆಲ್ಲಿ ಕೋರ್ಸ್ ಹೆಸರಿನ ಈ ಮಹಿಳೆಗೆ 496 ಆಸ್ಟ್ರೇಲಿಯನ್ ಡಾಲರ್ ದಂಡ ವಿಧಿಸಲಾಗಿತ್ತು. ಆದರೆ ಆಕೆ ಆ ವೇಳೆ ತನ್ನ ಮೆಚ್ಚಿನ ಐಸ್‌ಕ್ರೀಂ ತಿನ್ನುತ್ತಿದ್ದರು ಅಷ್ಟೇ.
ಮಹಿಳೆ ಟೋಪಿಯನ್ನು ತಿಂದಂತೆ ನಟಿಸಿದ ಗಜರಾಜ: ಮುದ್ದಾದ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 15 ಮಿಲಿಯನ್ ಮಂದಿ..!
ಪೊಲೀಸರು ತನಗೆ ದಂಡ ಹಾಕಿದ ಆರು ನಿಮಿಷಗಳ ಹಿಂದಷ್ಟೇ ತಾನು ಐಸ್‌ಕ್ರೀಂ ಖರೀದಿ ಮಾಡಿದ್ದಾಗಿ ತಿಳಿಸಿದ ಮಹಿಳೆ, ದಂಡದ ರಸೀದಿಯೊಂದಿಗೆ ಐಸ್‌ಕ್ರೀಂನ ರಾಪರ್ ಅನ್ನು ತೋರಿದ್ದಾರೆ.
ಕೋರ್ಟ್ ಮೆಟ್ಟಲೇರಿದ ಮೈಕೆಲ್ಲಿ, ತಮ್ಮ ಫೋನ್ ದಾಖಲೆಗಳನ್ನೂ ಸಲ್ಲಿಸಿ, ಆ ವೇಳೆ ತಾವು ಫೋನ್ ಬಳಸುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ವಿಕ್ಟೋರಿಯಾ ಪೊಲೀಸರನ್ನು ಸಂಪರ್ಕಿಸಿದ ಮೈಕೆಲ್ಲಿ, ಘಟನೆಯ ಡ್ಯಾಶ್‌ಕ್ಯಾಮ್ ಸಾಕ್ಷ್ಯವನ್ನು ತೋರಿದ್ದಾರೆ. ಕೊನೆಗೂ ಮೈಕೆಲ್ಲಿಗೆ ವಿಧಿಸಿದ್ದ ದಂಡವನ್ನು ಕೋರ್ಟ್ ವಜಾಗೊಳಿಸಿದೆ.