alex Certify ಥೇಟ್ ತಮ್ಮ ಪುತ್ರನಂತಿದ್ದ ಗೊಂಬೆ ಕಂಡು ಮಹಿಳೆಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥೇಟ್ ತಮ್ಮ ಪುತ್ರನಂತಿದ್ದ ಗೊಂಬೆ ಕಂಡು ಮಹಿಳೆಗೆ ಶಾಕ್

ಬಟ್ಟೆ ಅಂಗಡಿಗೆ ತೆರಳಿದ್ದ ಮಹಿಳೆಯು ತನ್ನ ಪುತ್ರನಂತೆಯೇ ಕಾಣುವ ಗೊಂಬೆಯನ್ನ ನೋಡಿ ಶಾಕ್​ ಆಗಿದ್ದಾರೆ.

ಬ್ರಿಟನ್​ನ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು ಈ ಗೊಂಬೆಯು ನೋಡಲು ಥೇಟ್​ ಅವರ 5 ವರ್ಷದ ಮಗನಂತೆಯೇ ಕಾಣುತ್ತಿದೆ.

ಲ್ಯೂಯಿಸ್​ ಎಂಬವರ ಸೋದರ ಸಂಬಂಧಿಯ ಪುತ್ರಿ ಈ ಗೊಂಬೆಯ ಫೋಟೋವನ್ನ ಕ್ಲಿಕ್​ ಮಾಡಿ ಅವರಿಗೆ ಕಳುಹಿಸಿದ್ದರು. ಈ ಫೋಟೋವನ್ನ ಲ್ಯೂಯಿಸ್​ ತನ್ನ ಪುತ್ರನಿಗೆ ತೋರಿಸಿದ್ದಾರೆ. ಆತ ತನ್ನಂತೆ ಹೋಲುವ ಗೊಂಬೆಯನ್ನ ಕಂಡು ಶಾಕ್​ ಆಗಿದ್ದಾನೆ.

ನನ್ನ ಪುತ್ರ ಆಸ್ಟಿನ್​ ಆ ಗೊಂಬೆಯನ್ನ ನೋಡುತ್ತಿದ್ದಂತೆಯೇ ಅರೆ..! ಈ ಗೊಂಬೆಯು ನನ್ನಂತೆಯೇ ಇದೆ ಎಂದು ಹೇಳಿದ್ದಾನೆ. ನಾನು ಈ ಅಂಗಡಿಯಲ್ಲಿ ಏನು ಮಾಡ್ತಿದ್ದೇನೆ ಎಂದೆಲ್ಲ ಪ್ರಶ್ನೆ ಕೇಳಿದ್ದ ಎಂದು ಲ್ಯೂಯಿಸ್​ ಹೇಳಿದ್ರು.

ಬಳಿಕ ನಾವು ಆ ಅಂಗಡಿಗೆ ಭೇಟಿ ನೀಡಿದೆವು. ನಮ್ಮ ಪುತ್ರ ಆ ಗೊಂಬೆಯನ್ನೇ ನೋಡುತ್ತಿದ್ದ. ಅಲ್ಲದೇ ಈ ಗೊಂಬೆ ತನ್ನಂತೆ ಏಕೆ ಇದೆ ಅನ್ನೋದೇ ಆತನಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...