ಬಟ್ಟೆ ಅಂಗಡಿಗೆ ತೆರಳಿದ್ದ ಮಹಿಳೆಯು ತನ್ನ ಪುತ್ರನಂತೆಯೇ ಕಾಣುವ ಗೊಂಬೆಯನ್ನ ನೋಡಿ ಶಾಕ್ ಆಗಿದ್ದಾರೆ.
ಬ್ರಿಟನ್ನ ಬಟ್ಟೆ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು ಈ ಗೊಂಬೆಯು ನೋಡಲು ಥೇಟ್ ಅವರ 5 ವರ್ಷದ ಮಗನಂತೆಯೇ ಕಾಣುತ್ತಿದೆ.
ಲ್ಯೂಯಿಸ್ ಎಂಬವರ ಸೋದರ ಸಂಬಂಧಿಯ ಪುತ್ರಿ ಈ ಗೊಂಬೆಯ ಫೋಟೋವನ್ನ ಕ್ಲಿಕ್ ಮಾಡಿ ಅವರಿಗೆ ಕಳುಹಿಸಿದ್ದರು. ಈ ಫೋಟೋವನ್ನ ಲ್ಯೂಯಿಸ್ ತನ್ನ ಪುತ್ರನಿಗೆ ತೋರಿಸಿದ್ದಾರೆ. ಆತ ತನ್ನಂತೆ ಹೋಲುವ ಗೊಂಬೆಯನ್ನ ಕಂಡು ಶಾಕ್ ಆಗಿದ್ದಾನೆ.
ನನ್ನ ಪುತ್ರ ಆಸ್ಟಿನ್ ಆ ಗೊಂಬೆಯನ್ನ ನೋಡುತ್ತಿದ್ದಂತೆಯೇ ಅರೆ..! ಈ ಗೊಂಬೆಯು ನನ್ನಂತೆಯೇ ಇದೆ ಎಂದು ಹೇಳಿದ್ದಾನೆ. ನಾನು ಈ ಅಂಗಡಿಯಲ್ಲಿ ಏನು ಮಾಡ್ತಿದ್ದೇನೆ ಎಂದೆಲ್ಲ ಪ್ರಶ್ನೆ ಕೇಳಿದ್ದ ಎಂದು ಲ್ಯೂಯಿಸ್ ಹೇಳಿದ್ರು.
ಬಳಿಕ ನಾವು ಆ ಅಂಗಡಿಗೆ ಭೇಟಿ ನೀಡಿದೆವು. ನಮ್ಮ ಪುತ್ರ ಆ ಗೊಂಬೆಯನ್ನೇ ನೋಡುತ್ತಿದ್ದ. ಅಲ್ಲದೇ ಈ ಗೊಂಬೆ ತನ್ನಂತೆ ಏಕೆ ಇದೆ ಅನ್ನೋದೇ ಆತನಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ ಎಂದು ಹೇಳಿದ್ರು.