alex Certify ವಿಚಿತ್ರ ಮೊಟ್ಟೆ ಪೋಸ್ಟ್ ಮಾಡಿದ ಮಹಿಳೆ: ಶತ್ರುವಿಗೆ ಕಳುಹಿಸಿ ಅಂದ್ರು ನೆಟ್ಟಿಗರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ಮೊಟ್ಟೆ ಪೋಸ್ಟ್ ಮಾಡಿದ ಮಹಿಳೆ: ಶತ್ರುವಿಗೆ ಕಳುಹಿಸಿ ಅಂದ್ರು ನೆಟ್ಟಿಗರು..!

ಮಹಿಳೆಯೊಬ್ಬಳು ತನ್ನ ಸ್ನೇಹಿತರ ಮನೆಯಲ್ಲಿದ್ದ ವಿಸ್ಮಯಕಾರಿಯಾದ ದೊಡ್ಡದಾದ ಮೊಟ್ಟೆಯ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ಫೋಟೋ ಭಾರಿ ವೈರಲ್ ಆಗಿದೆ. ಆಮಿ ಎಂಬ ಮಹಿಳೆಯು ತಮ್ಮ ಸ್ನೇಹಿತರ ಮನೆಗೆ ತೆರಳಿದ್ದಳು. ಅವರು ಇತ್ತೀಚೆಗಷ್ಟೇ ಬೇರೆ ಮನೆಗೆ ಶಿಫ್ಟ್ ಆಗಿದ್ದರು.

ಈ ವೇಳೆ ಕೋಣೆಯೊಂದರಲ್ಲಿ ವಿಸ್ಮಯಕಾರಿಯಾದಂತಹ ಮೊಟ್ಟೆಯನ್ನು ಆಮಿ ಗಮನಿಸಿದ್ದಾಳೆ. ಕೂಡಲೇ ಇದರ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದು ಸ್ನೇಹಿತನ ಪುತ್ರನ ವಾರ್ಡ್ ರೋಬ್ ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾಳೆ. ಆದರೆ ಈ ಬಗ್ಗೆ ಮನೆಯವರಿಗಾರಿಗೂ ತಿಳಿದೇ ಇರಲಿಲ್ಲವಂತೆ.

ಕುತೂಹಲ ಮೂಡಿಸಿದ ಸಚಿವ ಆನಂದ್ ಸಿಂಗ್ ನಡೆ; ನಾಳೆಯೇ ರಾಜೀನಾಮೆ…?

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆ, ಇದರ ಬಗ್ಗೆ ಯಾರಿಗಾದರೂ ಗೊತ್ತಿದೆಯಾ..? ಮತ್ತು ಇದನ್ನು ಅವರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ. ಇದನ್ನು ಪೆಟ್ಟಿಗೆಯಲ್ಲಿ ತುಂಬಿ ಶತ್ರುವಿಗೆ ಪೋಸ್ಟ್ ಮಾಡಿ ಅಂತಾ ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಡೈನೋಸಾರ್ ಮೊಟ್ಟೆ ಇರಬಹುದು ಅಂದಿದ್ದರೆ, ಮತ್ತೆ ಕೆಲವರು ಈ ಮೊಟ್ಟೆ ಜೇಡಗಳಿಗೆ ನೆಲೆಯಾಗಿರಬಹುದು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...