
ಹೊಳೆಯ ಮೇಲಿದ್ದ ಮರದ ದಿಮ್ಮಿಯ ಮೇಲೆ ಯುವತಿಯೊಬ್ಬರು ಯೋಗಾಸನ ಮಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಇದಾಗಿದೆ.
ಈ ಮೂಲಕ ಸಾಕಷ್ಟು ಹೆಸರು ಮಾಡಲು ನೋಡಿದ್ದಳು ಯುವತಿ. ಆದರೆ ಆದದ್ದೇ ಬೇರೆ. ಬೇರೆ ಬೇರೆ ರೀತಿಯ ಭಂಗಿಯನ್ನು ಪ್ರಯತ್ನಿಸುವಾಗ ಕೆಳಗೆ ಹರಿಯುತ್ತಿರುವ ಹೊಳೆಯೊಳಗೆ ಬಿದ್ದು ಹೋಗಿದ್ದಾಳೆ.
ಈ ವಿಡಿಯೋವನ್ನು ಮೂಲತಃ 2017 ರಲ್ಲಿ ಚಿಸಾ ಮೇರಿ ಅವರು ಪೋಸ್ಟ್ ಮಾಡಿದ್ದಾರೆ. ಇದು ಈಗ ಮತ್ತೊಮ್ಮೆ ವೈರಲ್ ಆಗಿದೆ. ಇದು ಖುದ್ದು ಅವರದ್ದೇ ವಿಡಿಯೋ ಆಗಿದೆ.
ತಾವು ಏನೋ ಮಾಡಲು ಹೋಗಿ ಏನೋ ಆಗಿದ್ದನ್ನು ಅವರು ತಿಳಿಸಿದ್ದಾರೆ. ಯೋಗದ ಭಂಗಿಯಲ್ಲಿ ತಿರುಗಲು ಹೋದಾಗ ಆಯತಪ್ಪಿ ಕೆಳಕ್ಕೆ ಬಿದ್ದಿರುವುದನ್ನು ವಿಡಿಯೋದಲ್ಲಿ ನೋಡಬಹುದು.ಇದನ್ನು ನೋಡಿ ನೆಟ್ಟಿಗರು ಬೇಕಿತ್ತಾ ಇದೆಲ್ಲಾ ಎನ್ನುತ್ತಿದ್ದಾರೆ.